ಉಡುಪಿ : ಉಡುಪಿ ಜಿಲ್ಲೆಯ ನೇಜಾರಿನಲ್ಲಿ 3 ದಿನಗಳ ಹಿಂದೆ ನಡೆದ ತಾಯಿ ಮತ್ತು ಮೂವರು ಮಕ್ಕಳು ಸೇರಿ ನಾಲ್ವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಹಾಗೂ ಬೆಳಗಾಂ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬೆಳಗಾಂನ ಕುಡುಚಿಯಲ್ಲಿ ಬಂಧಿಸಿದ್ದಾರೆ
ಆರೋಪಿಯನ್ನು ಪ್ರವೀಣ್ ಅರುಣ್ ಚೌಗುಳೆ ಎಂದು ಗುರುತಿಸಲಾಗಿದೆ ಈತ ಕೃತ್ಯ ಎಸಗಿ ಮಹಾರಾಷ್ಟ್ರಕ್ಕೆ ತೆರಳುತ್ತಿರುವ ಬಗ್ಗೆ ಮಾಹಿತಿ ಪಡೆದ ಉಡುಪಿ ಪೊಲೀಸರು ಬೆಳಗಾಂನ ಕುಡುಚಿಯ ಸಂಬಂಧಿಕರ ಮನೆಯಲ್ಲಿ ಬೆಳಗಾಂ ಪೊಲೀಸರ ಸಹಕಾರದೊಂದಿಗೆ ಪ್ರವೀಣ್ ಚೌಗುಳೆಯನ್ನು ವಶಕ್ಕೆ ಪಡೆದಿದ್ದಾರೆ
ಆರೋಪಿ ಪ್ರವೀಣ್ ಚೌಗುಳೆ ಮಂಗಳೂರು ಎರ್ಪೋರ್ಟ್ನಲ್ಲಿ ಏರ್ ಇಂಡಿಯಾ ಏಕ್ಸ್ ಪ್ರೆಸ್ ಕ್ಯಾಬಿನ್ ಕ್ರ್ಯೂ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಮೃತ ಆಯ್ನಾಝ್ ಕೂಡ ಇಲ್ಲೇ ಕೆಲಸ ಮಾಡುತ್ತಿದ್ದಳು ಮೊಬೈಲ್ ಟವರ್ ಲೋಕೇಶನ್ ಆಧರಿಸಿ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದು ಕುಡುಚಿಯಿಂದ ಉಡುಪಿಗೆ ಕರೆ ತರುತ್ತಿದ್ದಾರೆ