Home » ಇಸ್ಪೀಟ್‌ ಆಟ : ಇಬ್ಬರ ಸೆರೆ, ಮೂವರು ಪರಾರಿ
 

ಇಸ್ಪೀಟ್‌ ಆಟ : ಇಬ್ಬರ ಸೆರೆ, ಮೂವರು ಪರಾರಿ

by Kundapur Xpress
Spread the love

ಕುಂದಾಪುರ : ಕುಂದಾಪುರ ತಾಲೂಕು ಕಟ್ ಬೆಲ್ತೂರು ಹರಗೋಡು ಕ್ರಾಸ್‌ನಲ್ಲಿರುವ ಮಲಾಯಾಳಿ ಬೊಬ್ಬರ್ಯ ಹಾಗೂ ಕೆಂಪಣ್ಣಹೈಗುಳಿ ಸಹಪರಿವಾರ ದೈವಸ್ಥಾನದ ಪಕ್ಕದಲ್ಲಿರುವ ಹಾಡಿ ಜಾಗದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಇಬ್ಬರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್‌ರು ಬಂಧಿಸಿದ್ದು, ಮೂವರು ಪರಾರಿಯಗಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಭೀಮಾಶಂಕರ ಸಿನ್ನೂರ ಸಂಗಣ್ಣ ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಸ್ಪೀಟ್ ‘ಜುಗಾರಿ ಆಡುತ್ತಿದ್ದ ವಕ್ವಾಡಿ ಗ್ರಾಮದ ಸದಾನಂದ (44) ಮತ್ತು ಕಟ್‌ ಬೇಲ್ಲೂರು ಗ್ರಾಮದ ಗಂಗಾಧರ (49) ಎಂಬುವರನ್ನು ಬಂಧಿಸಿದ್ದಾರೆ. ಕಟ್ ಬೇಲ್ಲೂರು ಗ್ರಾಮದ ಸಂಜೀವ ಮತ್ತು ರಜತ್ ಹಾಗೂ ಬಗ್ವಾಡಿ ಗ್ರಾಮದ ಸೋನು ಪರಾರಿಯಾಗಿದ್ದಾರೆ. ಬಂಧಿತರಿಂದ ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ್ದ 17,200 ರೂಪಾಯಿ ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!