ಉಡುಪಿ: ಕೇರಳದ ಎರ್ನಾಕುಲಂನಲ್ಲಿ ಕಳ್ಳತನ ಮಾಡಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಕೋಟ ಪೋಲಿಸರು ಉಡುಪಿ ಜಿಲ್ಲೆಯ ಕೋಟ ಜಂಕ್ಷನ್ ಬಳಿ ಬಂಧಿಸಿದ್ದಾರೆ. ಬಿಹಾರ ಮೂಲದ ಮೊಹಮ್ಮದ್ ಇರ್ಫಾನ್ (35) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 1 ಕೆ.ಜಿ. 211 ಗ್ರಾಂ ತೂಕದ ಚಿನ್ನಾಭರಣ, ಹೊಂಡಾ ಸಿಟಿ ಕಾರು ಸಹಿತ ಅಂದಾಜು 1.50 ಕೋ.ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಕೇರಳ ರಾಜ್ಯದ ಎರ್ನಾಕುಲಂ ಸೌತ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರೇಮಾನಂದ ಕೃಷ್ಣನ್ ಕೋಟಾ ಪೊಲೀಸ್ ಠಾಣೆಗೆ ಆಗಮಿಸಿ, ಎರ್ನಾಕುಲಂ ಸೌತ್ ಟೌನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿ ಚಿನ್ನಾಭರಣಗಳೆಂದು ದಾಖಲೆಗಳನ್ನು ಹಾಜರುಪಡಿಸಿ, ಕೇರಳಕ್ಕೆ ತೆಗೆದುಕೊಂಡು ಹೋಗಿದ್ದಾರೆ