Home » ಕಾರು ಡಿಕ್ಕಿ ಹೊಡೆಸಿ ಕೊಲೆಯತ್ನ ಪ್ರಕರಣ
 

ಕಾರು ಡಿಕ್ಕಿ ಹೊಡೆಸಿ ಕೊಲೆಯತ್ನ ಪ್ರಕರಣ

ಆರೋಪಿಗೆ ನ್ಯಾಯಾಂಗ ಬಂಧನ

by Kundapur Xpress
Spread the love

ಮಂಗಳೂರು : ಅತಿಯಾದ ವೇಗದಲ್ಲಿ ಕಾರು ಚಲಾಯಿಸಿ ವ್ಯಕ್ತಿಯೊಬ್ಬರ ಹತ್ಯೆಗೆ ಯತ್ನಿಸಿದ ಆರೋಪಿಗೆ ಮಂಗಳೂರಿನ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಸತೀಶ್ ಕುಮಾರ್ ಕೊಲೆಯತ್ನ ಪ್ರಕರಣದ ಆರೋಪಿ. ಈತ ಗುರುವಾರ ರಾತ್ರಿ ಬಿಜೈ ಕಾಪಿಕಾಡ್‌ನ 6ನೇ ಕ್ರಾಸ್‌ನಲ್ಲಿ ರಾತ್ರಿ ಬೈಕಿಗೆ ಕಾರು ಡಿಕ್ಕಿ ಹೊಡೆಸಿ ಬೈಕ್ ಚಾಲಕನನ್ನು ಕೊಲೆ ಮಾಡಲು ಯತ್ನಿಸಿದ್ದ, ಈ ಅಪಘಾತದಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮಹಿಳೆ ಯಲ್ಲವ್ವ ಉಪ್ಪಾಳ ಕೂಡ ಸಿಲುಕಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಬೈಕ್ ಸವಾರ ಮುರಳಿ ಪ್ರಸಾದ್ ಅವರಿಗೂ ತೀವ್ರ ತೆರನಾದ ಗಾಯಗಳಾಗಿದ್ದು ಇಬ್ಬರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Related Articles

error: Content is protected !!