100
ಮುಂಬೈ : ಚಲಿಸುವ ಕಾರಿನ ಬಾನೆಟ್ ಮೇಲೆ ಹತ್ತಿ ಕುಣಿಯುವ ‘ಔರಾ ಫಾರ್ಮಿಂಗ್’ ನೃತ್ಯ ಇತ್ತೀಚೆಗೆ ಫೇಮಸ್ ಆಗಿದೆ. ಆದರೆ ಇದು ಅಪಾಯಕಾರಿ ಹಾಗೂ ಟ್ರಾಫಿಕ್ ನಿಯಮದ ಉಲ್ಲಂಘನೆ ಕೂಡ. ಹೀಗೆ ಮಾಡಲು ಹೋದ ಯುವತಿ ಯೊಬ್ಬಳ ಮೇಲೆ ಪೊಲೀಸರು ಮುಂಬೈನಲ್ಲಿ ಕೇಸು ಜಡಿದಿದ್ದಾರೆ.
ತನ್ನ ಗೆಳೆಯ ಅಲ್-ಫೆಶ್ ಶೇಖ್ ಎಂಬಾತನ ಚಲಿಸುವ ಬೆಂಜ್ ಕಾರಿನ ಬಾನೆಟ್ ಮೇಲೆ 24 ವರ್ಷದ ನಜೀನ್ ಸುಲ್ಲೆ ಎಂಬ ತರುಣಿ ಹತ್ತಿ ಕುಣಿದಿದ್ದಳು. ಪೊಲೀಸರು ಈಗ ಕೇಸು ಹಾಕಿದ್ದು ಇನ್ನು ಆಕೆ ಜೈಲಲ್ಲಿ ಕುಣಿಯುವ ಸಾಧ್ಯತೆ ಇದೆ

