316
ಕೋಟ: ಪ್ರದೀಪ್ ಆವರ್ಸೆ ಎಂಬವರು ತಂದೆ ಸುರೇಶ್ ರವರನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಬೈಕ್ ನಲ್ಲಿ ಕಕ್ಕುಂಜೆ ಮಾರ್ಗವಾಗಿ ಕಾಳಾವರಕ್ಕೆ ಹೋಗುತ್ತಿರುವಾಗ ಗಾವಳಿ ಮಹಾಗಣಪತಿ ಹಳೇಕಟ್ಟೆ ಅಂಗಡಿಯ ಎದುರು ಮತ್ತೋರ್ವ ಬೈಕ್ ಸವಾರ ರಾಮದಾಸ್ ಎಂಬುವವರು ರಸ್ತೆಯಲ್ಲಿ ಸಾಗುತ್ತಿದ್ದ ವಾಹನವನ್ನು ಓವರ್ ಟೆಕ್ ಮಾಡುವ ಭರದಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಪ್ರದೀಪರವರು ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬೈಕ್ ಸವಾರರು ರಸ್ತೆಗೆ ಬಿದ್ದಿದ್ದು, ಪ್ರದೀಪ್ ಎಂಬವರಿಗೆ ಎಡಕಾಲಿಗೆ ಪೆಟ್ಟಾಗಿದ್ದು ಹಿಂಬದಿ ಸವಾರನಾಗಿ ಕುಳಿತ ಸುರೇಶ್ ರವರಿಗೆ ಮುಖಕ್ಕೆ ಮತ್ತು ತಲೆಗೆ ತೀವ್ರ ತರದ ಗಾಯವಾಗಿದ್ದು ಸುರೇಶ್ ರವರನ್ನು ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು ಮಾರನೇ ದಿನ ಚಿಕಿತ್ಸೆ ಸ್ಪಂದಿಸದೇ ಸುರೇಶ್ ರವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

