249
ಮಣಿಪಾಲ : ಆರು ತಿಂಗಳ ಹಿಂದೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.ಬ್ರಹ್ಮಾವರದ ಪುತ್ತೂರು ನಿವಾಸಿ ಪ್ರಕಾಶ್ ನಾಯಕ್ ಬಂಧಿತ ಆರೋಪಿ. ಈತನಿಂದ ಕಳವು ಮಾಡಿರುವ ಬೈಕ್ ಸ್ವಾಧೀನ ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಮಣಿಪಾಲ ಪೊಲೀಸ್ ಠಾಣೆ ನಿರೀಕ್ಷಕ ದೇವರಾಜ್ ಟಿ.ವಿ., ಪೊಲೀಸ್ ಉಪ ನಿರೀಕ್ಷಕ ರಾಘವೇಂದ್ರ, ಸಿಬ್ಬಂದಿಗಳಾದ ಇಮ್ರಾನ್, ಪ್ರಸನ್ನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

