Home » ಲಾರಿ ಸಾಗುತ್ತಿದ್ದಾಗಲೇ ಹಠಾತ್‌ ಕುಸಿದ ಸೇತುವೆ
 

ಲಾರಿ ಸಾಗುತ್ತಿದ್ದಾಗಲೇ ಹಠಾತ್‌ ಕುಸಿದ ಸೇತುವೆ

by Kundapur Xpress
Spread the love

ಮೈಸೂರು  : ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಾರಿ ಚಲಿಸುತ್ತಿದ್ದಾಗಲೇ ಸೇತುವೆ ಕುಸಿದು ಬಿದ್ದ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಇಟ್ನಾ ಸಮೀಪದ ಕಬಿನಿ ಬಲದಂಡೆ ನಾಲೆ ಬಳಿ ನಡೆದಿದೆ.

ಪುರದಕಟ್ಟೆ ಮಾರ್ಗವಾಗಿ ನಂಜನಗೂಡಿಗೆ ಭತ್ತ ಹೊತ್ತೊಯ್ಯುತ್ತಿದ್ದ ಲಾರಿ ಸೇತುವೆ ಮೇಲೆ ಸಾಗುತ್ತಿದ್ದಾಗಲೇ ಹಠಾತ್ ಆಗಿ ಸೇತುವೆ ಕುಸಿದಿದೆ.

ಲಾರಿಯಲ್ಲಿದ್ದ ಲೋಡರ್ಸ್‌ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಬಿನಿ ಬಲದಂಡೆ ನಿರ್ಮಾಣವಾದಾಗ ಕಟ್ಟಿದ್ದ ಸೇತುವೆ ಇದ್ದಾಗಿದ್ದು ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಶಿಥಿಲಗೊಂಡಿತ್ತು ಎನ್ನಲಾಗಿದೆ.

 

Related Articles

error: Content is protected !!