Home » ಎಟಿಎಂನಿಂದ ಕಳವಿಗೆ ವಿಫಲ ಯತ್ನ
 

ಎಟಿಎಂನಿಂದ ಕಳವಿಗೆ ವಿಫಲ ಯತ್ನ

3 ಪೊಲೀಸ್‌ ತಂಡ ರಚನೆ

by Kundapur Xpress
Spread the love

ಉಡುಪಿ : ಉದ್ಯಾವರ ಪೇಟೆಯಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ 3 ಮಂದಿ ಮುಸುಕುಧಾರಿಗಳು  ಕಳ್ಳತನಕ್ಕೆ ನಡೆಸಿದ ಪ್ರಯತ್ನ ವಿಫಲವಾಗಿದೆ. ಬೆಳಗ್ಗಿನ ಜಾವ 2.30ರ ಸುಮಾರಿಗೆ ಗಂಟೆಗೆ 3 ಮಂದಿ ಮುಸುಕು ಹಾಕಿಕೊಂಡಿದ್ದ ಕಳ್ಳರು ಎಟಿಎಂ ಬಳಿ ಬಂದಿದ್ದರು. ಅವರಲೊಬ್ಬ ಎಂಟಿಎಂ ಒಳಗೆ ಹೊಕ್ಕು ಕೈಯಿಂದ ಎಟಿಎಂ ಬಾಕ್ಸ್ ತೆರೆಯಲು ಯತ್ನಿಸಿದ್ದಾರೆ. ಈ ವೇಳೆ ಎಟಿಎಂನ ಸೈರನ್ ಜೋರಾಗಿ ಮೊಳಗಿದ್ದರಿಂದ ಗಾಬರಿಗೊಂಡ ಕಳ್ಳರು ಸ್ಥಳದಿಂದ ಓಡಿಹೋಗಿದ್ದಾರೆ.

ಎಟಿಎಂ ಸೈರನ್ ಬ್ಯಾಂಕಿನ ಸೆಕ್ಯೂರಿಟಿ ವಿಭಾಗಕ್ಕೆ ಸಂದೇಶ ರವಾನಿಸಿದ್ದು, ತಕ್ಷಣ ಸೆಕ್ಯೂರಿಟಿ ಸಿಬ್ಬಂದಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಮೇಲಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು ಮತ್ತು ಎಟಿಎಂನಲ್ಲಿರುವ ಸಿಸಿ ಕ್ಯಾಮರದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ವಿಧಿವಿಜ್ಞಾನ ತಜ್ಞರು ಕೂಡ ಆಗಮಿಸಿ ಪರಿಶೀಲಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಟಿಎಂನಿಂದ ಹಣ ಕಳ್ಳತನವಾಗಿಲ್ಲ ಕಳ್ಳರ ಪತ್ತೆಗೆ ಪೊಲೀಸರ 3 ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ.

 

Related Articles

error: Content is protected !!