Home » ಬೆಳ್ಳಂಬೆಳಿಗ್ಗೆ ಕಾರು ಪಲ್ಟಿ
 

ಬೆಳ್ಳಂಬೆಳಿಗ್ಗೆ ಕಾರು ಪಲ್ಟಿ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಮುಖ್ಯರಸ್ತೆಯಲ್ಲಿರು ಸಟ್ವಾಡಿ ಸುಂದರ ಶೆಟ್ಟಿ ಅಂಗಡಿಯ ಎದುರುಗಡೆ ಇನ್ನೋವಾ ಕಾರೊಂದು ಬೆಳ್ಳಂಬೆಳಿಗ್ಗೆ ಪಲ್ಟಿಯಾದ ಘಟನೆ ನಡೆದಿದೆ

ತಲ್ಲೂರಿನ ನಿವಾಸಿ ರಾಘವೇಂದ್ರ ಶೆಟ್ಟಿ ಎಂಬವರು ನಿನ್ನೆ ರಾತ್ರಿ ತನ್ನ ಮನೆಯಲ್ಲಿ ಪ್ರದರ್ಶನಗೊಂಡ ಯಕ್ಷಗಾನವನ್ನು ನೋಡಿ ಮನೆಗೆ ಹಾಲು ತರಲು ಕುಂದಾಪುರ ನಗರಕ್ಕೆ ಬಂದಿದ್ದು ಪಾರಿಜಾತ ಸರ್ಕಲ್‌ನಿಂದ  ಶಾಸ್ತ್ರಿಪಾರ್ಕಿಗೆ ತರಳುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ

ರಸ್ತೆಯ ಎಡಬದಿಯಲ್ಲಿರುವ ದೇವದಾರಿ ಮರಕ್ಕೆ ಡಿಕ್ಕಿ ಹೊಡೆದ ಕಾರು ಎರಡು ಪಲ್ಟಿಯಾಗಿ ರಸ್ತೆ ವಿಭಾಜಕದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ

ಕಾರಿನ ಮುಂಭಾಗವು ಸಂಪೂರ್ಣ ಜಖಂಗೊಂಡಿದ್ದು ರಾಘವೇಂದ್ರ ಶೆಟ್ಟಿಯವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್‌ ಮೂಲಕ ಕಾರನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು

 

Related Articles

error: Content is protected !!