Home » ಅಕ್ರಮ ದನ ಸಾಗಾಟ : ಆರೋಪಿಗಳು ಪರಾರಿ
 

ಅಕ್ರಮ ದನ ಸಾಗಾಟ : ಆರೋಪಿಗಳು ಪರಾರಿ

by Kundapur Xpress
Spread the love

ಬೈಂದೂರು : ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಒತ್ತಿನೆಣೆ ಬಳಿ ಕಾರಿನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ತಡೆದು ದನಗಳನ್ನು ರಕ್ಷಿಸಿದ ಘಟನೆ ನಡೆದಿದೆ ಈ ನಡುವೆ ಆರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.

ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ನವೀನ್‌ ಬೋರ್ಕರ್ ರವರಿಗೆ ಕುಂದಾಪುರದಿಂದ ಭಟ್ಕಳ ಕಡೆಗೆ ಒಂದು ಕೆಂಪು ಬಣ್ಣದ BREZZA ಕಾರಿನಲ್ಲಿ ದನವನ್ನು ಕಳವು ಮಾಡಿಕೊಂಡು ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಬೈಂದೂರು ಒತ್ತಿನಣೆಯ ತಿರುವಿನಲ್ಲಿ ಬ್ಯಾರಿಕೇಡ್‌ ಹಾಕಿ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿರುವ ವಾಹನಗಳನ್ನು ಒತ್ತಿಣೆನೆ ತಿರವಿನಲ್ಲಿ ತಪಾಸಣೆ ಮಾಡುತ್ತಿದ್ದರು.
ಬೆಳಿಗ್ಗೆ 6:00 ಗಂಟೆ ಸಮಯಕ್ಕೆ ಬೈಂದೂರು ಕಡೆಯಿಂದ ಬಂದ ಒಂದು ಕೆಂಪು ಬಣ್ಣದ KA-47-M-8960 ನಂಬ್ರನ BREZZA ಕಾರನ್ನು ತಡೆದು ನಿಲ್ಲಿಸಿದಗ ಕಾರನ್ನು ಹಿಂದಕ್ಕೆ ರಿವರ್ಸ ತೆಗದುಕೊಳ್ಳಲು ಪ್ರಯತ್ನಿಸಿದ್ದು ಹಿಂದುಗಡೆ ವಾಹನ ಇದ್ದುದರಿಂದ ಹಿಂದುಗಡೆ ತೆಗದುಕೊಳ್ಳಲು ಅಗದೆ ಇರುವಾಗ ಕಾರನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಇದ್ದ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ಓಡಿ ಹೋಗಿರುತ್ತಾರೆ. ಕಾರಿಗೆ ಟಿಂಟ್‌ ಗ್ಲಾಸ್‌ ಅಳವಡಿಸಿದ್ದು ಕಾರಿನ ಡಿಕ್ಕಿಯನ್ನು ತೆರೆದಾಗ  ಯಾವುದೇ ಪರವಾನಿಗೆ ಪಡೆಯದೇ ಕಾರಿನ ಡಿಕ್ಕಿಯಲ್ಲಿ ನಾಲ್ಕು ದನಗಳ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಒಂದರ ಮೇಲೆ ಒಂದನ್ನು ಹಾಕಿ ಎಲ್ಲಿಂದಲೋ ಮಾಂಸ ಮಾಡುವ ಉದ್ದೇಶದಿಂದ ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

 

Related Articles

error: Content is protected !!