ಬೆಂಗಳೂರು : ಚಿತ್ರಮರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಅವರಿಗೆ ವಿಶೇಷ ಸೌಲಭ್ಯ ಕಲ್ಪಿಸಿ ಕರ್ತವ್ಯಲೋಪ ಎಸಗಿದ ಆರೋಪದ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಅಮಾನತು ಮಾಡಲಾಗಿದೆ
ಜೈಲಿನ ಮುಖ್ಯ ಅಧೀಕ್ಷಕ ಶೇಷ ಮೂರ್ತಿ, ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ, ಕಾರಾಗೃಹದ ಭದ್ರತಾ ವಿಭಾಗದ ಉಸ್ತುವಾರಿ ಜೈಲರ್ ಪ್ರಭು.ಎಸ್. ಖಂಡ್ರೆ, ಜೈಲರ್‌ಗಳಾದ ಶರಣ ಬಸವ ಅಮೀನಗಡ, ಸಹಾಯಕ ಜೈಲರ್‌ಗಳಾದ ಎಲ್.ಎಸ್.ತಿಪ್ಪೇಸ್ವಾಮಿ, ಶ್ರೀಕಾಂತ್ ತಳವಾರ್, ಮುಖ್ಯ ವೀಕ್ಷಕ ರಾದ ಸಂಪತ್ ಕುಮಾರ್ ಕಡಪಟ್ಟಿ, ಯಂಕಪ್ಪ ಕೊರ್ತಿ ಹಾಗೂ ವೀಕ್ಷಕ ಬಸಪ್ಪ ತೇಲಿ ಸೇರಿ 9 ಮಂದಿ ಅಮಾನತುಗೊಂಡಿದ್ದಾರೆ.
ಸಿಎಂ ಸೂಚನೆ ಬೆನ್ನಲ್ಲೇ ಕ್ರಮ:
ಜೈಲಿನಲ್ಲಿ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಲಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ರಾಜ್ಯ ಬಂದೀಖಾನೆ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣ ಮೂರ್ತಿ ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದರು. ಅಲ್ಲದೆ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸೂಚಿಸಿದ್ದರು