Home » ಬಹುಕೋಟಿ ವಂಚನೆ ಕೇಸ್: ಸಿಐಡಿ ತಂಡ ಮಂಗಳೂರಿಗೆ
 

ಬಹುಕೋಟಿ ವಂಚನೆ ಕೇಸ್: ಸಿಐಡಿ ತಂಡ ಮಂಗಳೂರಿಗೆ

by Kundapur Xpress
Spread the love

ಮಂಗಳೂರು : ಬಹುಕೋಟಿ ಮೊತ್ತ ವಂಚನೆ ಪ್ರಕರಣದಲ್ಲಿ ಬಿಹಾರ ಉದ್ಯಮಿಯೊಬ್ಬರಿಗೆ 10 ಕೋಟಿ.ರು. ವಂಚನೆ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದ್ದು, ಸಿಐಡಿ ತಂಡ ಇಂದು ಜು.23 ರಂದು ಮಂಗಳೂರಿಗೆ ಆಗಮಿಸಲಿದೆ. ನಗರದ ಬೊಲ್ಲಗುಡ್ಡ ನಿವಾಸಿ ರೋಶನ್ ಸಲ್ದಾನ (43) ಪ್ರಕರಣದ ಆರೋಪಿಯಾಗಿದ್ದು, ಈತ ಶ್ರೀಮಂತರಿಗೆ, ಉದ್ಯಮಿಗಳಿಗೆ 50 ಕೋಟಿ ರು. ವಂಚನೆ ಮಾಡಿರುವ ದಾಖಲೆ ಪೊಲೀಸರಿಗೆ ಪತ್ತೆಯಾಗಿದೆ.

ಇದು ಮಾತ್ರವಲ್ಲದೆ ದೇಶದ ನಾನಾ ಕಡೆಯಿಂದ ಈತನ ವಂಚನಾ ಜಾಲದ ಬಗ್ಗೆ ಪೊಲೀಸರಿಗೆ ದೂರುಗಳು ಬರುತ್ತಿವೆ. ಬಿಹಾರದ ಉದ್ಯಮಿಯೊಬ್ಬರಿಗೆ ರೋಶನ್ ರಿಯಲ್ ಎಸ್ಟೇಟ್ ವಿಚಾರದಲ್ಲಿ ಮೋಸ ಮಾಡಿದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದನ್ನು ಸಿಐಡಿಗೆ ವಹಿಸುವಂತೆ ಪೊಲೀಸ್ ಕಮಿಷನರ್‌ಪ್ರಸ್ತಾವನೆ ಸಲ್ಲಿಸಿದ್ದರು. ಇದರ ತನಿಖೆಯನ್ನು ಕೂಡ ಸಿಐಡಿ ನಡೆಸಲಿದೆ.

 

Related Articles

error: Content is protected !!