265
ಬೆಂಗಳೂರು : ನಗರದ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥಗೊಂಡು, ಚಿಕಿತ್ಸೆ ಫಲಿಸದೆ ಐದು ವರ್ಷದ ಮಗು ಸಾವನ್ನಪ್ಪಿದೆ. 5 ವರ್ಷದ ಮಗು ಧೀರಜ್ ಮೃತಪಟ್ಟಿದೆ. ತಂದೆ ಬಾಲರಾಜ್ ಮತ್ತು ತಾಯಿ ನಾಗಲಕ್ಷ್ಮೀ ಅಸ್ವಸ್ಥಗೊಂಡಿದ್ದು, ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ
ರಾತ್ರಿ ಊಟ ಮುಗಿಸಿದ ನಂತರ ಮನೆಯ ಫ್ರಿಡ್ಜ್‌ನಲ್ಲಿದ್ದ ಕೇಕ್‌ನ್ನು ಮಗುವಿನೊಂದಿಗೆ ಪೋಷಕರು ಸಹ ತಿಂದಿದ್ದಾರೆ. ಬಳಿಕ ಈ ಮೂವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಮೂವರ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಧೀರಜ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ಬರುವ ಮೊದಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

