117
ಮುಂಬೈ : ನಾಗ್ಪುರದಲ್ಲಿ ಸೋಮವಾರ ನಡೆದ ಕೋಮು ಹಿಂಸಾಚಾರದ ರೂವಾರಿ ಅಲ್ಪಸಂಖ್ಯಾತರ ಪ್ರಜಾಸತ್ತಾತ್ಮಕ ಪಕ್ಷದ ಸ್ಥಳೀಯ ನಾಯಕ ಫಾಹೀಮ್ ಶಮೀಮ್ ಖಾನ್‌ರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಗಲಭೆಯಲ್ಲಿ ಹಲವರು ಗಾಯಗೊಂಡಿದ್ದು ಗಣೇಶಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಫಾಹೀಮ್ ಖಾನ್ ಹೆಸರನ್ನು ಅಧಿಕೃತವಾಗಿ ಸೇರಿಸಿದ ಕೆಲವೇ ಗಂಟೆಗಳಲ್ಲಿ ಖಾನ್ ಬಂಧನವಾಗಿದೆ.
ಹಿಂಸಾಚಾರ ಭುಗಿಲೆದ್ದ ಕೆಲ ಕ್ಷಣಗಳ ಮೊದಲು ಖಾನ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾದ ಅವರ ಫೋಟೋ ಮತ್ತು ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಯಶೋಧರ ನಗರದ ಸಂಜಯ್ ಬಾಗ್ ಕಾಲೊನಿ ನಿವಾಸಿ ಮತ್ತು ಎಂಡಿಪಿಯ ನಗರ ಅಧ್ಯಕ್ಷರಾಗಿರುವ 38 ವರ್ಷದ ಫಾಹೀಮ್ ಶಮೀಮ್ ಖಾನ್ ಅವರನ್ನು ಮಾ.21ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

