Home » ಕ್ರೇನ್‌ನಿಂದ ಬಿದ್ದು ಓರ್ವ ಸಾವು
 

ಕ್ರೇನ್‌ನಿಂದ ಬಿದ್ದು ಓರ್ವ ಸಾವು

ಕ್ರೇನ್ ಚಾಲಕ ಗಾಯಾಳುಗಳ ರಕ್ಷಣೆಗೆ ಬಾರದೆ, ಕ್ರೇನ್‌ನೊಂದಿಗೆ ಸ್ಥಳದಿಂದ ಪರಾರಿ

by Kundapur Xpress
Spread the love

ಉಡುಪಿ : ಕ್ರೇನ್ ಮೂಲಕ ಮನೆಯ ಟೆರೇಸ್ ಸೋರಿಕೆ ಪರಿಶೀಲಿಸಲು ಹೋದ ವೇಳೆ ಕೆಳಗೆ ಬಿದ್ದ ಇಬ್ಬರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಫ್ರಾನ್ಸಿಸ್ ಪಟೊರ್ಡೋ (65) ಮೃತ ವ್ಯಕ್ತಿ.

ಲೋಕೋಪಯೋಗಿ ಕಚೇರಿ ಬಳಿ  ಶನಿವಾರ ಮಧ್ಯಾಹ್ನದ ವೇಳೆ ಫ್ರಾನ್ಸಿಸ್ ಹಾಗೂ ಮನೆ ಕೆಲಸದಾಕೆ ಶಾರದಾ ಇಬ್ಬರೂ ಕ್ರೇನ್ ಸಹಾಯದಿಂದ ಟೆರೇಸ್ ಸೋರಿಕೆ ಪರಿಶೀಲಿಸಲು ಮೇಲ್ಗಡೆ ಹೋಗಿದ್ದಾರೆ. ಈ ವೇಳೆ ಕ್ರೇನ್ ಬೆಲ್ಟ್ ತುಂಡಾಗಿ ಇಬ್ಬರೂ ನೆಲಕ್ಕುರುಳಿದ್ದಾರೆ. ಮನೆ ಮಾಲಿಕರ ಸಹೋದರ ಫ್ರಾನ್ಸಿಸ್ ಹಾಗೂ ಶಾರದಾ ಅವರನ್ನು ಸಮಾಜ ಸೇವಕ ನಿತ್ಯಾನಂದ ವಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಫ್ರಾನ್ಸಿಸ್ ಮೃತಪಟ್ಟರೆ, ಶಾರದಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಬಿದ್ದು ನರಳಾಡುತ್ತಿದ್ದರೂ, ಕ್ರೇನ್ ಚಾಲಕ ಗಾಯಾಳುಗಳ ರಕ್ಷಣೆಗೆ ಮುಂದೆ ಬಾರದೆ, ಕ್ರೇನ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

 

Related Articles

error: Content is protected !!