Home » ಟ್ರೇಡಿಂಗ್ ಆಪ್ ಮೂಲಕ ಲಕ್ಷಾಂತರ ರೂ. ಹಣ ವಂಚನೆ
 

ಟ್ರೇಡಿಂಗ್ ಆಪ್ ಮೂಲಕ ಲಕ್ಷಾಂತರ ರೂ. ಹಣ ವಂಚನೆ

by Kundapur Xpress
Spread the love

ಪುತ್ತೂರು : ಬೆಂಗಳೂರಿನ ಕೊಡಿಗೆಹಳ್ಳಿ ನಿವಾಸಿ, ಪ್ರಸ್ತುತ ಪುತ್ತೂರಿನ ಬಿಗ್ ರಾಕ್ ಪ್ರಾಪರ್ಟಿಸ್ ಕಂಪನಿಯಲ್ಲಿ ಸಿವಿಲ್ ಇಂಜೀನಿಯರ್ ಆಗಿರುವ ಆಕಾಶ್ ಟ್ರೇಡಿಂಗ್ ಆಪ್ ಮೂಲಕ ಲಕ್ಷಾಂತರ ರೂ. ಹಣವನ್ನು ಸೈಬರ್ ಕಳ್ಳರು ಲಪಟಾಯಿಸಿದ್ದಾರೆ.ಆಕಾಶ್ ಅವರ ಮೊಬೈಲ್‌ಗೆ ಟ್ರೇಡಿಂಗ್ ಹೆಸರಿನಲ್ಲಿ ಲಿಂಕ್ ಬಂದಿದ್ದು, ಅದರಂತೆ ಸುಮಾರು 1,95,670 ರೂಪಾಯಿ ಹಣವನ್ನು ಫೋನ್ ಪೇ ಮೂಲಕ ಕಳುಹಿಸಿದ್ದರು.

ಆದರೆ ಟ್ರೇಡಿಂಗ್ ಆಪ್‌ನವರ ಕಡೆಯಿಂದ ಯಾವುದೇ ಸ್ಪಂಧನೆ ಇಲ್ಲದಾಗ ಆಕಾಶ್ ಅವರು ಮೋಸ ಹೋಗಿರುವುದು ತಿಳಿದು ಬಂದಿದೆ. ಹೀಗಾಗಿ ಆಕಾಶ್ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

Related Articles

error: Content is protected !!