ಕೊಲೆಯತ್ನ : ಪ್ರಕರಣ ದಾಖಲು
ಕುಂದಾಪುರ : ರವೀಂದ್ರ ಎಂಬಾತ ಕೊಲ್ಲುವ ಉದ್ದೇಶದಿಂದ ಕಾರನ್ನು ಮೈಮೇಲೆ ಹಾಯಿಸಿದ್ದು ನಂತರ ಕಾರನ್ನು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಭಾಸ್ಕರ ನೀಡಿದ ದೂರಿನಂತೆ ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದೇವಲ್ಕುಂದದಲ್ಲಿ ಘಟನೆ ನಡೆದಿದೆ.
ಹೊಂಡದಲ್ಲಿ ಹುಗಿದುಕೊಂಡ ಬಸ್
ಕುಂದಾಪುರದಿಂದ ಗಂಗೊಳ್ಳಿಗೆ ಸಾಗುತ್ತಿದ್ದ ಸರಕಾರಿ ಬಸ್ ಗುಜ್ಜಾಡಿ ಮುಖ್ಯ ರಸ್ತೆಯಲ್ಲಿ ನೀರಿನ ಪೈಪ್ ಲೈನ್ ಹೊಂಡದಲ್ಲಿ ಸಿಲುಕಿದ ಘಟನೆ ನಡೆದಿದೆ ಮುಳ್ಳಿಕಟ್ಟೆ ಗುಜ್ಜಾಡಿ ಮಾರ್ಗದ ಮುಖ್ಯ ರಸ್ತೆ ಬದಿಯಲ್ಲಿ ಜಲಜೀವನ್ ನೀರಿನ ಪೈಪ್‌ಲೈನ್ ಹೊಂಡ ಅಪಾಯವನ್ನು ತಂದೊಡ್ಡುತ್ತಿದ್ದು ನಂತರ ಕ್ರೈನ್ ಸಹಾಯದಿಂದ ಹೊಂಡದಲ್ಲಿ ಸಿಲುಕಿದ ಬಸ್‌ನ್ನು ಮೇಲಕ್ಕೆ ಎತ್ತಲಾಯಿತು.
ವ್ಯಕ್ತಿ ನಾಪತ್ತೆ :
ಮೂಲತಃ ಬ್ರಹ್ಮಾವರ ತಾಲೂಕು ಬಿಲ್ಲಾಡಿ ನಿವಾಸಿ ಮೋಹನದಾಸ್ (80 ವರ್ಷ) ನಾಪತ್ತೆಯಾಗಿದ್ದಾರೆ. ಹೈದರಾಬಾದ್‌ನಲ್ಲಿ ವಾಸವಾಗಿರುವ ಅವರು ಸಂಬಂಧಿ ಕರ ವೈಕುಂಠ ಸಮಾರಾಧನೆಗಾಗಿ ಊರಿಗೆ ಬಂದಿದ್ದರು. ಜು.7ರಂದು ಮಧ್ಯಾಹ್ನ ಹೈದರಾಬಾದ್‌ಗೆ ಹೋಗುವುದಾಗಿ ಹೇಳಿ ಹೊರಟವರು ಅತ್ತ ಹೈದರಬಾದಿಗೂ ಹೋಗದೇ ಇತ್ತ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುತ್ತಾರೆ ಎಂದು ಸದಾಶಿವ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಢಿಕ್ಕಿ ಸವಾರ ಗಂಭೀರ
ತಲ್ಲೂರು ರೈಲ್ವೆ ಸೇತುವೆ ಬಳಿ ಬೈಕ್ ಸವಾರ ಓವರ್ ಟೇಕ್ ಮಾಡುವ ಭರದಲ್ಲಿ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಬಳಿಕ ರಿಕ್ಷಾದ ಹಿಂದಿದ್ದ ಕಾರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದ್ದು ಬೈಕ್ ಸವಾರ ರಂಜನ್ ಗಂಭೀರವಾಗಿ ಗಾಯಗೊಂಡಿದ್ದಾರೆ ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.