ಉಡುಪಿ:ಸಮೀಪದ ಕುಂಜಿಬೆಟ್ಟು ಪರಿಸರದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಡಿ ಜೆ ಸೌಂಡ್ ಹಾಕಿದ್ದ ಮನೆಗೆ ನಗರ ಠಾಣೆ ಪೋಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
ರಾತ್ರಿ 1.30ರ ಸಮಾರಿಗೆ ಅತೀ ಕರ್ಕಶವಾದ ಸೌಂಡ್ ಬರುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನನ್ವಯ ಪೋಲೀಸರು ತಡರಾತ್ರಿ ಶರತ್ ಎಂಬುವವರ ಮನೆಗೆ ದಾಳಿ ಮಾಡಿ 4ಸೌಂಡ್ ಬಾಕ್ಸ್ ಡಿಜೆ ಪರಿಕರಗಳು ಹಾಗೂ ಲೈಟಿಂಗ್ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ ಆರೋಪಿ ಶರತ್ ಮೆಹಂದಿ ಕಾರ್ಯಕ್ರಮಕ್ಕೆ ಯವುದೇ ರೀತಿಯ ಪರವಾನಿಗೆ ಹಾಗೂ ಪೂರ್ವಾನುಮತಿಯನ್ನು ಪಡೆದಿರಲಿಲ್ಲ