ಕುಂದಾಪುರ: ವಡೇರಹೋಬಳಿ ಗ್ರಾಮದ ನೆಹರೂ ಮೈದಾನ ಬಳಿ ಸ್ಕೂಟಿ ನಿಲ್ಲಿಸಿ ಇಳಿಯುವಾಗ ಬಹಾದ್ದೂಷಾ ರಸ್ತೆಯ ನಿವಾಸಿ ಹರೀಶ್ ಖಾರ್ವಿ ಅವರ ಪತ್ನಿ ಸರೋಜಾ (45) ಅವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ
ಕುಸಿದು ಬಿದ್ದ ಸರೋಜಾ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.