Home » ಅಡಕೆ ಮರ ಬಿದ್ದು ವೃದ್ಧ ಸಾವು
 

ಅಡಕೆ ಮರ ಬಿದ್ದು ವೃದ್ಧ ಸಾವು

by Kundapur Xpress
Spread the love

ಕಾರ್ಕಳ : ಒಣಗಿದ ಅಡಕೆ ಮರವನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಮರ ತಲೆ ಮೇಲೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮ ವ್ಯಾಪ್ತಿಯ ಮೂಡುಕುಡೂರು ಕೆಳಗಿನ ಮನೆ ಎಂಬಲ್ಲಿ ನಡೆದಿದೆ. ರಾಮ (62) ಮೃತಪಟ್ಟವರು. 

ಮದ್ಯಾಹ್ನ ಕಟ್ಟಿಗೆ ಸಲುವಾಗಿ ಮನೆಯ ತೋಟದಲ್ಲಿರುವ ಒಣಗಿದ ಅಡಕೆ ಮರವನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಆಕಸ್ಮಿಕವಾಗಿ ಮರವು ತುಂಡಾಗಿ ರಾಮ ಅವರ ತಲೆಯ ಮೇಲೆ ಬಿದ್ದಿದೆ. ಗಾಯಗೊಂಡಿದ್ದ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ” ದಾಖಲಿಸಲಾಗಿತ್ತು. ರಾಮ ಅವರು ಚಿಕಿತ್ಸೆ ಸ್ಪಂದಿಸದ ಕಾರಣ ಅವರನ್ನು ಕರೆದುಕೊಂಡು ಹೋಗುವಂತೆ ವೈದ್ಯಾಧಿಕಾರಿಗಳು ತಿಳಿಸಿದ್ದು, ಅದರಂತೆ ಅವರನ್ನು ಮನೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!