ವಿಟ್ಲ ; ಬೋಳಂತೂರು ಸಮೀಪದ ನಾರ್ಶದ ಉದ್ಯಮಿ ಮನೆಯಲ್ಲಿ ಜಾರಿ ನಿರ್ದೆಶನಾಲಯ (ಇಡಿ) ಅಧಿಕಾರಿಗಳ ಸೋಗಿನಲ್ಲಿ ದರೋಡೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ನಾಲ್ಕು ತಂಡಗಳಾಗಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಚಲನವಲನಗಳ ಮಹತ್ವದ ಸುಳಿವನ್ನು ಪಡೆದ ತಂಡ ವಿವಿಧ ರಾಜ್ಯಗಳಲ್ಲಿ ಶೋಧಕ್ಕೆ ಮುಂದಾಗಿದೆ.
ಮಂಗಳೂರು ಸಿಂಗಾರಿ ಬೀಡಿ ಮಾಲಕ ನಾರ್ಶ ನಿವಾಸಿ ಸುಲೈಮಾನ್ ಹಾಜಿ ಅವರ ಚಲನಪಲನಗಳ ಮಾಹಿತಿ ಸಂಗ್ರಹ ಸುಮಾರು ಮೂರು ದಿನಗಳಿಂದ ನಡೆದಿದೆ ಎಂದು ಹೇಳಲಾಗುತ್ತಿದೆ. ಬೀಡಿ ಕಂಪನಿಗೆ ಬಂದು ಹೋಗುವ ಸರಿಯಾದ ಮಾಹಿತಿಯನ್ನು ಹೊಂದಿದ ವ್ಯಕ್ತಿಗಳಿಂದಲೇ ಸಂಪೂರ್ಣ ಮಾಹಿತಿ ದರೋಡೆಕೋರರಿಗೆ ಲಭಿಸಿದೆ ಎನ್ನಲಾಗುತ್ತಿದೆ.
ಕೃತ್ಯಕ್ಕೆ ಮಾರುತಿ ಎರ್ಟಿಗಾ ಕಾರನ್ನು ಬಳಸಿಕೊಳ್ಳಲಾಗಿದ್ದು, ಕುಡ್ತಮುಗೇರು, ಕೋಡಪದವು, ಬೋಳಂತೂರು, ಸುರಿಬೈಲು ಆಸುಪಾಸಿನಲ್ಲಿ ಸುತ್ತಾಡಿಕೊಂಡಿರುವುದು ಬಹಿರಂಗಗೊಂಡಿದೆ ನಾರ್ಶದಿಂದ ಕಲ್ಲಡ್ಕ ಮೂಲಕ ಮಂಗಳೂರಿಗೆ ಕಾರು ಸಾಗಿದೆ ಎಂದು ಹೇಳಲಾಗುತ್ತಿದ್ದು ಟೋಲ್ ಗೇಟ್‌ನಲ್ಲಿ ಕಾರಿನ ಮಹತ್ವದ ಸುಳಿವು ಲಭಿಸಿದೆ ಎಂದು ಹೇಳಲಾಗುತ್ತಿದೆ.