161
ಉಡುಪಿ : ಇಲ್ಲಿನ ಮಣಿಪಾಲದ ದಶರಥ ನಗರದ ಲಾಡ್ಜ್ ನ ಕೋಣೆಯೊಂದರಲ್ಲಿ ಮಾದಕ ವಸ್ತುಗಳನ್ನು ಹೊಂದಿದ್ದ ಮೂವರು ಆರೋಪಿಗಳನ್ನು ಮಣಿಪಾಲ ಠಾಣಾ ಪಿಐ ಮಹೇಶ್ ಪ್ರಸಾದ್ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳನ್ನು ಕಾಪು ನಿವಾಸಿ ಮಹಮ್ಮದ್ ಅಜರುದ್ದೀನ್ ಯಾನೆ ಮಂಚಕಲ್ ಅಜರುದ್ದೀನ್, ಪುಣೆ ನಿವಾಸಿ ರಾಜೇಶ್ ಪ್ರಕಾಶ್ ಜಾದವ್, ಮಲ್ಪೆ ನಿವಾಸಿ ನಾಜೀಲ್ ಯಾನೆ ಆಶಿಪ್ ಎಂದು ಗುರುತಿಸಲಾಗಿದೆ
ಆರೋಪಿಗಳಿಂದ 40 ಸಾವಿರ ಮೌಲ್ಯದ13.70 ಗ್ರಾಂ ಎಂಡಿಎಂಎ 10.500ಮೌಲ್ಯದ 225 ಗ್ರಾಂ ತೂಕದ ಗಾಂಜಾ, 15 ಸಣ್ಣ ಸಣ್ಣ ಪ್ಲಾಸ್ಟಿಕ್ ಕವರ್, 5 ಸಿರೀಂಜ್ ಗಳು, 5 ಎಂಎಲ್ ಸ್ಪಿರೈಲ್ ವಾಟರ್‌ನ ಮೂರು ಪ್ಲಾಸ್ಟಿಕ್ ಸೀಸೆ ಹಾಗೂ 500 ಮೌಲ್ಯದ ಎಸಿಇ ಕಂಪೆನಿಯ ಕೀಪ್ಯಾಡ್ ಮೊಬೈಲ್ ಮತ್ತು ರೂ. 5000 ರೂ ಮೌಲ್ಯದ ರೆಡ್‌ಮಿ ಕಂಪೆನಿಯ ಟಚ್ ಸ್ಟೀನ್ ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

