407
ಮಣಿಪಾಲ: ಹೆರ್ಗ ಗ್ರಾಮದ ಈಶ್ವರ ನಗರ ದಲ್ಲಿರುವ ವಸತಿ ಗೃಹ ಒಂದರ ಎರಡನೇ ಮಹಡಿಯಲ್ಲಿರುವ ರೂಮ್ ನಂಬರ್ 207ರಲ್ಲಿ ಓರ್ವ ವ್ಯಕ್ತಿ ಮಾರಾಟ ಮಾಡುವ ಉದ್ದೇಶದಿಂದ ಮಾದಕ ವಸ್ತುವನ್ನು ಇಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಪೊಲೀಸ್ ನಿರೀಕ್ಷಕರಾದ ಟಿವಿ ದೇವರಾಜ್ ಇವರು ದಾಳಿ ನಡೆಸಿ ಆಪಾದಿತ ಪ್ರಾಂಜಲ್ ನಿಂದ 10650 ಬೆಲೆಯ 123 ಗ್ರಾಂ ತೂಕದ ಗಾಂಜಾ ಹಾಗೂ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

