ಹಾಸನ : ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ಜನ್ಮದಿನಾಂಕವನ್ನು ಆಧಾರ್ ಲಿಂಕ್‌ಗೆ ಸೇರಿಸುತ್ತಿದ್ದಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ ಅನುಶ್ರೀ ಎಂಬಾಕೆ ಸಿಕ್ಕಿಬಿದ್ದಿದ್ದು, ಅಕೆ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಈಗಾಗಲೇ ಬಾಂಗ್ಲದೇಶದಿಂದ ಸಾವಿರಾರು ಜನರು ಇಲ್ಲಿಗೆ ವಲಸೆ ಬರುತ್ತಿರುವ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಗಳಲ್ಲಿ ಪ್ರತಿನಿತ್ಯ ನೋಡುತ್ತಿದ್ದೇವೆ. ಇಂತಹವರಿಗೆ ನಮ್ಮವರೇ ಕೆಲವರು ಹಣದಾಸೆಗೆ ನಕಲಿ ದಾಖಲೆ ಗಳನ್ನು ಸೃಷ್ಟಿಸಿಕೊಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯ ಎಂಬಂತೆ ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೆ ಆಧಾರ್ ಸೇವಾ ಕೇಂದ್ರದ ಆಪರೇಟರ್ ಆಗಿ ಕೆಲಸ ಮಾಡುವ ಮಹಿಳೆಯೊಬ್ಬರು ತನಿಖೆ ವೇಳೆ ಸಿಕ್ಕಿಬಿದ್ದಿದ್ದಾರೆ. ಕಳೆದ ಎರಡುವರೆ ವರ್ಷ ದಿಂದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೆ ಆಧಾರ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಶ್ರೀ ಎಂಬುವರ ಬಳಿ ಹಣ ಕೊಟ್ಟರೇ ಸಾಕು ನಕಲಿ ಜನ್ಮದಿನಾಂಕವನ್ನು ಸೃಷ್ಟಿ ಮಾಡಲು ಖಾಸಗಿ ಇಂಟರ್ ಪಾರ್ಲರ್ ಗೆ ವಿಳಾಸ ಹೇಳಿ ಕಳುಹಿಸಿ ಕೊಡುತ್ತಾರೆ. ಅಲ್ಲಿ ಸಿದ್ಧವಾದ ಮೇಲೆ ಈಕೆ ಆಧಾರ್‌ಗೆಲಿಂಕ್ ಮಾಡಿಕೊಡುವುದನ್ನುಮೈಗೂ ಡಿಸಿಕೊಂಡು ಸಂಬಳದ ಜೊತೆ ಈ ರೀತಿಯ ದೇಶದ್ರೋಹಿ ಕೆಲಸಮಾಡಿ ಒಬ್ಬರಿಂದ 5ಸಾವಿರದಿಂದ 10ಸಾವಿರದವರೆಗೂ ಹಣ ಪಡೆಯುತ್ತಿದ್ದಳು. ಈ ಬಗ್ಗೆ ವಿಚಾರ ತಿಳಿದ ಇಲ್ಲಿ ಆಧಾರ್ ಲಿಂಕ್ ಅಧಿಕಾರಿ ಬೆಂಗಳೂರಿನ ಕಚೇರಿಗೆ ವಿಷಯ ಮುಟ್ಟಿಸಿದ್ದಾರೆ
ಇದನ್ನು ಪರಿಶೀಲನೆ ಮಾಡಲು ಬಂದಿದ್ದ ದಾಖಲೆ ಬೆಂಗಳೂರಿನ ವಲಯ ಅಧಿಕಾರಿ ವಿಜಯಕುಮಾರ್ ಆಧಾರ್ ಬಗ್ಗೆ ಆಳವಾಗಿ ಪರಿಶೀಲನೆ ಮಾಡಿದಾಗ ಅನುಶ್ರೀ ಐಡಿಯಿಂದ ಇಲ್ಲಿ ನಕಲಿ ಮಾಡುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ. ಅನುಶ್ರೀ ಎಂಬುವರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆಸಿ ವಿಚಾರಿಸಿದರು ನಮ್ಮಲ್ಲೆ ಈತರ ಘಟನೆ ನಡೆದಿರುವುದು ಬೇಸರದ ವಿಚಾರ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ಬೇಸರ ವ್ಯಕ್ತಪಡಿಸಿದರು. ಕೂಡಲೇ ಈಕೆ ಮೇಲೆ ದೂರು ದಾಖಲಿಸಿ ಎಫ್.ಐ.ಆರ್. ಮಾಡುವಂತೆ ಪೊಲೀಸ್ ಅಧಿಕಾರಿಯನ್ನು ಕರೆಸಿ ಅನುಶ್ರೀಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಈಕೆಯ ಕೆಲಸದ ಅವಧಿಯ ಎರಡೂವರೆ ವರ್ಷದ ಎಲ್ಲಾ ದಾಖಲೆಯನ್ನು ಪರಿಶೀಲಿಸುವಂತೆ ಡಿಸಿ ಸೂಚಿಸಿದರು.