Home » ಮೀನುಗಾರಿಕೆ ವೇಳೆ ಅವಘಡ : ಮೂವರು ನಾಪತ್ತೆ
 

ಮೀನುಗಾರಿಕೆ ವೇಳೆ ಅವಘಡ : ಮೂವರು ನಾಪತ್ತೆ

by Kundapur Xpress
Spread the love

ಕುಂದಾಪುರ : ಗಂಗೊಳ್ಳಿಯ ಕಡಲ ತೀರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಗಾಳಿ ಮಳೆಗೆ ಮುಳುಗಿ ನಾಲ್ವರ ಪೈಕಿ ಮೂವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಗಂಗೊಳ್ಳಿಯ ಮಡಿ ಲೈಟ್ ಹೌಸ್ ಬಳಿ ಇಂದು ಸಂಭವಿಸಿದೆ.

ನಾಪತ್ತೆಯಾದವರನ್ನು ರೋಹಿತ್ ಖಾರ್ವಿ (38 ವರ್ಷ), ಸುರೇಶ ಖಾರ್ವಿ(45 ವರ್ಷ) ಜಗನ್ನಾಥ್ ಖಾರ್ವಿ(43 ವರ್ಷ) ಎಂದು ತಿಳಿದು ಬಂದಿದ್ದು ಓರ್ವ ಮೀನುಗಾರ ಅಪಾಯದಿಂದ ಪಾರಾಗಿದ್ದಾನೆ.

ಸಮುದ್ರದಲ್ಲಿ ಕಡಲ ಅಬ್ಬರ ಜೋರಾಗಿದ್ದು ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಟ್ರಾಲ್ ದೋಣಿ ಸಮುದ್ರದ ಅಲೆಗೆ  ಮಗುಚಿ ಬಿದ್ದಿದೆ  ಪರಿಣಾಮ ನಾಲ್ಕು ಮಂದಿ ಸಮುದ್ರ ಪಾಲಾಗಿದ್ದಾರೆ  ಈ ವೇಳೆ ಓರ್ವ ಮೀನುಗಾರ ಸಂತೋಷ ಖಾರ್ವಿ  ಎಂಬವರು  ಈಜಿ ದಡ ಸೇರಿದ್ದಾರೆ.

ನಾಪತ್ತೆಯಾಗಿರುವ ಮೂವರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು ಕರಾವಳಿ ಕಾವಲು ಪಡೆ, ಗಂಗೊಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ

 

Related Articles

error: Content is protected !!