ನೂತನ ವಂಚನೆ ಪ್ರಕರಣ ಬಯಲಿಗೆ
ಕೋಟ: ಮಂಗಳೂರು ತೆಂಕಎಕ್ಕಾರು ಗ್ರಾಮದ ಮೊಹಮದ್ ತೌಫೀಕ್ ಎಂಬವರು ಟ್ಯಾಕ್ಸಿ ಚಾಲಕರಾಗಿದ್ದು ಕಾರ್ಕಳ ಪೇಟೆಯ ಪ್ರಕಾಶ್ ಹೋಟೇಲ್ ಬಳಿ ತಮ್ಮ ಪ್ಯಾಸೆಂಜರ್ ಸೂಚನೆಯ ಮೇರೆಗೆ ಕಾಯುತ್ತಾ ನಿಂತುಕೊಂಡಿರುವಾಗ, ಅಪರಿಚಿತ ಆರೋಪಿಯು ಮೊಹಮದ್ ತೌಫೀಕ್ ರವರ ಬಳಿ ಬಂದು ಹಿಂದಿಯಲ್ಲಿಮಾತನಾಡಿ ಆತನ ಬಳಿಯಿದ್ದ ಗಲ್ಪ್ ದೇಶದಲ್ಲಿ ಚಲಾವಣೆಯಲ್ಲಿರುವ 100 ದಿರಮ್ಸ್ ಮೌಲ್ಯದ ಕರೆನ್ಸಿಯ ಒಂದು ನೋಟನ್ನು ತೋರಿಸಿ, ಇದನ್ನು ಎಲ್ಲಿ ಎಕ್ಸ್‌ಚೇಂಜ್ ಮಾಡುತ್ತಾರೆ ಎಂದು ಕೇಳಿ ಇವರಲ್ಲಿ ವಿಚಾರಿಸಿದ್ದು, ಆ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದರೂ ಕೂಡಾ ಆ ನೋಟನ್ನು ಮೊಹಮದ್ ತೌಫೀಕ್ ರವರಿಗೆ ನೀಡಿದ್ದೂ ಅಲ್ಲದೇ ತಮ್ಮ ಆಂಟಿ ಬಳಿ ಇನ್ನೂ ಇದೇ ರೀತಿಯ ತುಂಬಾ ದಿರಮ್ಸ್ ಕರೆನ್ಸಿ ಇದೆ, ಬೇಕಾದಲ್ಲಿ ಕಡಿಮೆ ಮೌಲ್ಯಕ್ಕೆ ಕೊಡಿಸುತ್ತೇನೆ ” ಎಂದು ಹೇಳಿ, ಮೊಹಮದ್ ತೌಫೀಕ್ ರವರನ್ನು ಪದೇ ಪದೇ ಸಂಪರ್ಕಿಸಿದನು ದಿನಾಂಕ 11/03/2023 ರಂದು ಬೆಳಿಗ್ಗೆ ಸುಮಾರು 10:30 ಗಂಟೆಗೆ ಸಾಲಿಗ್ರಾಮ ಬಸ್‌ನಿಲ್ದಾಣದ ಬಳಿಯ ಸರ್ವಿಸ್ ರಸ್ತೆಯಲ್ಲಿಒಂದು ಪ್ಲಾಸ್ಟಿಕ್‌ಚೀಲದಲ್ಲಿದ್ದ 100 ದಿರಮ್ಸ್‌ಮೌಲ್ಯದ ಕರೆನ್ಸಿಯ ನೋಟಿನ ಕಟ್ಟುಗಳನ್ನು ತೋರಿಸಿ, ಅದರಲ್ಲಿ ದಿರಮ್ಸ್‌ಕರೆನ್ಸಿಯ 900 ನೋಟುಗಳು ಇದೆ ಎಂಬುದಾಗಿ ಆರೋಪಿತನು ಮತ್ತಿಬ್ಬರು ಆರೋಪಿಗಳೊಂದಿಗೆ ಸೇರಿಕೊಂಡು ಮೊಹಮದ್ ತೌಫೀಕ್ ರವರನ್ನು ನಂಬಿಸಿ, 3 ಜನ ಆರೋಪಿಗಳು ನಾನಾ ರೀತಿಯಲ್ಲಿ ನಾಟಕವಾಡಿ, ಮೊಹಮದ್ ತೌಫೀಕ್ ರವರಿಗೆ ವಂಚಿಸುವ ದುರುದ್ದೇಶದಿಂದ ದಿನಾಂಕ 14/03/2023 ರಂದು ಮಧ್ಯಾಹ್ನ 1.15 ಗಂಟೆಗೆ ಕೆಂಪು ಬಣ್ಣದ ಚೀಲದಲ್ಲಿ ದಿನಪತ್ರಿಕೆ ಹಾಗೂ ಸೋಪು ಇಟ್ಟು ಪ್ಯಾಕ್‌ಮಾಡಿ ಮೂರ್ನಾಲ್ಕು ಬಟ್ಟೆಯಿಂದ ಗಟ್ಟಿಯಾಗಿ ಗಂಟು ಹಾಕಿ, ಅದನ್ನು ತೋರಿಸಿ ಅದರಲ್ಲಿ 100 ದಿರಮ್ಸ್‌ಮೌಲ್ಯದ 900 ಕರೆನ್ಸಿ ನೋಟುಗಳು ಇವೆ ಎಂಬುದಾಗಿ ಮೊಹಮದ್ ತೌಫೀಕ್ ರವರಿಗೆ ನಂಬಿಸಿ, ಅವರಿಗೆ ಆರೋಪಿಗಳು ಬಣ್ಣದ ಚೀಲವನ್ನು ನೀಡಿದ್ದು ಚೀಲವನ್ನು ಪರಿಶೀಲಿಸುವ ಸಂದರ್ಭದಲ್ಲಿ ಮೊಹಮದ್ ತೌಫೀಕ್ ರವರ ಕೈಯಲ್ಲಿದ್ದ ಹಣದ ಚೀಲವನ್ನು ಎಳೆದುಕೊಂಡು, ಆರೂವರೆ ಲಕ್ಷ ರೂಪಾಯಿ ಹಣವನು ಸುಲಿಗೆ ಮಾಡಿ ಪರಾರಿಯಾಗಿರುತ್ತಾರೆ.ಈ ಬಗ್ಗೆ ಕೋಟ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.