Home » ಅಂತರಾಜ್ಯ ಕಳ್ಳತನ ಆರೋಪಿಯ ಬಂಧನ
 

ಅಂತರಾಜ್ಯ ಕಳ್ಳತನ ಆರೋಪಿಯ ಬಂಧನ

by Kundapur Xpress
Spread the love

ಕುಂದಾಪುರ : ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಬಳಿಯಿರುವ ಪಂಚಗಂಗಾ ಸೊಸೈಟಿಯಲ್ಲಿ 22/06/2024 ರಂದು ಶನಿವಾರ ರಾತ್ರಿ 01:40ರ ಸುಮಾರಿಗೆ ಕುಂದಾಪುರದ ಶೈನ್ ಇನ್ ಸೆಕ್ಯುರಿಟಿಯವರು ಪಂಚಗಂಗಾ ಸೊಸೈಟಿಯ ಹಿಂಬದಿಯ ಕಿಟಕಿಯನ್ನು ಕತ್ತರಿಸಿ ಒಳ ಬಂದ ಕಳ್ಳನನ್ನು ಲೈವ್ ಸಿಸಿ ಕ್ಯಾಮರಾದಲ್ಲಿ ವೀಕ್ಷಿಸಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಗಂಗೊಳ್ಳಿ ಪೊಲೀಸರಿಗೆ ತಿಳಿಸಿದ್ದು ರೌಂಡ್ಸ್ ಕರ್ತವ್ಯದಲ್ಲಿದ್ದ ಪಿ ಎಸ್ ಐ ಯವರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತಕ್ಷಣ ಧಾವಿಸಿ ಕಳವು ಮಾಡುತ್ತಿದ್ದವನನ್ನು ವಶಕ್ಕೆ ಪಡೆದಿದ್ದಾರೆ ಕಳ್ಳತನದ ಮಹಿತಿ ಪಡೆದ ಬ್ರಾಂಚಿನ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಕೂಡ ಸ್ಥಳಕ್ಕೆ ಬಂದಿದ್ದರು

ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಅಂತರಾಜ್ಯ ಆರೋಪಿ ಪ್ರಕಾಶ್ ಬಾಬು ಯಾನೆ ನಿಯಾಝ್ (46 ವರ್ಷ) ಎಂದು ತಿಳಿದುಬಂದಿದ್ದು  ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿಯ ನಿವಾಸಿಯಾಗಿದ್ದಾನೆ  

ಈತನ ವಿರುದ್ಧ ಕೇರಳ ರಾಜ್ಯದ ಕುಂಬಳೆ ಪೊಲೀಸ್ ಠಾಣೆಯಲ್ಲಿ, ಕ್ಯಾಲಿಕಟ್ ನ ಮಾರಾಡ ಪೊಲೀಸ್ ಠಾಣೆಯಲ್ಲಿ ತಲಶೇರಿ ಪೊಲೀಸ್ ಠಾಣೆಯಲ್ಲಿ, ಕಣ್ಣೂರು ನಗರ ಪೊಲೀಸ್ ಠಾಣೆಯಲ್ಲಿ, ಆಲಪ್ಪಿ ಮಾವಿಲಕಾರ ಪೊಲೀಸ್ ಠಾಣೆ, ಚೆಂಗನೂರು ಪೊಲೀಸ್ ಠಾಣೆ ಹಾಗೂ ಕರ್ನಾಟಕ ರಾಜ್ಯದಲ್ಲಿ ದ. ಕ ಜಿಲ್ಲೆಯ ಕೊಣಾಜೆ ಠಾಣೆಯಲ್ಲಿ, ಕುಂದಾಪುರ ಠಾಣೆಯಲ್ಲಿ, ಬೆಂಗಳೂರು ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ಪ್ರಕರಣ ಸೇರಿ ಸುಮಾರು 13 ಕಳವು ಪ್ರಕರಣಗಳ ದಾಖಲಾಗಿದೆ ಈತನು ದಿನಾಂಕ:15/06/2024 ರಂದು ಕೇರಳ ರಾಜ್ಯದ ಮಾವಿಲಕಾರ ಹಾಗೂ ಚೆಂಗನೂರು ಠಾಣಾ ವ್ಯಾಪ್ತಿಯ ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ

          ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಿಂದ ಕಳವು ಮಾಡಿದ ನಗದು 2,000 ರೂಪಾಯಿ ಮೌಲ್ಯದ ಹಣ, ಕಳವು ಮಾಡಲು ಬಂದ ಒಂದು ಕೆಎ-05-ಕೆಎ 1353 ನೇ ಸುಝುಕಿ ಎಕ್ಸೆಸ್ ಮೋಟಾರು ಸೈಕಲ್, 1 ಮೊಬೈಲ್ ಸೆಟ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮೂರು ರಾಡ್, ಕಟ್ಟಿಂಗ್ ಪ್ಲೇಯರ್ ಹಾಗೂ ಇನ್ನಿತರ ವಸ್ತುಗಳನ್ನು ಪೊಲೀಸರು  ಸ್ವಾಧೀನ ಪಡಿಸಿಕೊಂಡಿದ್ದಾರೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿದ್ದಲಿಂಗಯ್ಯ ಟಿ ಎಸ್, ಪರಮೇಶ್ವರ ಹೆಗಡೆ ಮಾರ್ಗದರ್ಶನದಂತೆ ಕುಂದಾಪುರ ಪೋಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ. ಯು ಹಾಗೂ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾದ ಸವಿತೃತೇಜ್ ಪಿ ಡಿ ನಿರ್ದೇಶನದಂತೆ ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ಹರೀಶ್ ಆರ್   ಬಸವರಾಜ ಕನಶೆಟ್ಟಿ ಏ ಎಸ್ ಐ ಅಮೃತೇಶ್  ಹಾಗೂ ಸಿಬ್ಬಂದಿಗಳಾದ ಮೋಹನ ಪೂಜಾರಿ, ನಾಗರಾಜ, ಸಂದೀಪ್ ಕುರಣಿ, ಸತೀಶ್ ದೇವಾಡಿಗ, ರಾಘವೇಂದ್ರ ಪೂಜಾರಿ, ನಿತಿನ್, ಶರಣಪ್ಪ ರವರು ಕಾರ್ಯಾಚರಣೆಯಲ್ಲಿ ಭಾಗಹಿಸಿದ್ದು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ. ಅರುಣ್‌ ಕೆ ರವರು ಪೊಲೀಸ್‌ ತಂಡವನ್ನು ಅಭಿನಂದಿಸಿದ್ದಾರೆ

   

Related Articles

error: Content is protected !!