Home » ಮಾದಕ ವಸ್ತು ವಿರುದ್ದ ಕಾರ್ಯಾಚರಣೆ : 7 ಮಂದಿ ಸೆರೆ
 

ಮಾದಕ ವಸ್ತು ವಿರುದ್ದ ಕಾರ್ಯಾಚರಣೆ : 7 ಮಂದಿ ಸೆರೆ

by Kundapur Xpress
Spread the love

ಉಡುಪಿ : ಮಣಿಪಾಲದಲ್ಲಿ ವಿದ್ಯಾರ್ಥಿಗಳನ್ನು ಮತ್ತು ಕೈಗಾರಿಕೆಗಳು, ಖಾಸಗಿ ಇಂಡಸ್ಟ್ರೀಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಗುರಿ ಮಾಡಿಕೊಂಡು ಗಾಂಜಾ ಮತ್ತು ಎಲ್‌ಎಸ್‌ಡಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಒಬ್ಬ ಸ್ಥಳೀಯ ಮತ್ತು ಇಬ್ಬರು ಕೇರಳ ಮೂಲದ ವ್ಯಕ್ತಿಗಳನ್ನು ಪೊಲೇಸರು ಬಂಧಿಸಿದ್ದಾರೆ. ಜೊತೆಗೆ ಗಾಂಜಾ ಸೇವನೆ ಮಾಡಿದ ಇತರ ನಾಲ್ವರನ್ನು ಬಂಧಿಸಲಾಗಿದೆ.

ಕೇರಳದ ಕಾರ್ಮಿಕರಾದ ಅಜೀಶ್, ವಿಪಿನ್, ಬಿಪಿನ್ ಮತ್ತು ಆಕಿಲ್  ಗಾಂಜಾ ಸೇವನೆಯ ಬಗ್ಗೆ ದೃಢಪಡಿಸಿಕೊಂಡು, ಅವರುಗಳ ಪರೀಕ್ಷೆ ಬಗ್ಗೆ ಸ್ಯಾಂಪಲ್ ಸ್ವೀಕರಿಸಿ ಪ್ರಯೋಗಾಲಯಕ್ಕೆ ನೀಡಲಾಗಿದ್ದು, ನಾಲ್ಕು ಜನರು ಗಾಂಜಾ ಸೇವಿಸಿದ್ದು ದೃಢಪಟ್ಟಿದೆ. ಇವರುಗಳಿಗೆ ಗಾಂಜಾ ಪೂರೈಸಿದ ಬಗ್ಗೆ ಮಾಹಿತಿ ಕಲೆಹಾಕಿದ್ದು ಇವರುಗಳಿಗೆ ಆರೋಪಿ ಮಿಥುನ್ ಎನ್ನುವವನು ಗಾಂಜಾ ಮಾರಾಟ ಮಾಡಿದ ಬಗ್ಗೆ ತಿಳಿದುಬಂದಿದೆ

ಮಣಿಪಾಲ ಪೊಲೀಸರು ಈಶ್ವರನಗರ ನರಸಿಂಗೆ ದೇವಸ್ಥಾನ ರಸ್ತೆಯ ಬಳಿ ಆರೋಪಿಗಳನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ

 

Related Articles

error: Content is protected !!