ಕುಂದಾಪುರ : ಕಂಡ್ಲೂರು ಸಮೀಪದ ಗುಲ್ವಾಡಿಯ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾವನ್ನು ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ ಬಂಧಿತರನ್ನು ನಜರುಲ್ಲಾ ಖಾನ್ (40ವರ್ಷ) ಹಾಗೂ ಪತ್ನಿ ಶ್ರೀಮತಿ ಫಾತಿಮಾ (33ವರ್ಷ) ಎಂದು ತಿಳಿದುಬಂದಿದೆ
ಗುಲ್ವಾಡಿ ಸಮೀಪದ ಉದಯನಗರ ಎಂಬಲ್ಲಿ ನಜರುಲ್ಲಾ ಖಾನ್ ಎಂಬವರ ಮನೆಯಲ್ಲಿ ಗಾಂಜಾವನ್ನು ಮಾರಾಟ ಮಾಡಲು ದಾಸ್ತಾನು ಇಟ್ಟುಕೊಂಡಿದ್ದಲ್ಲದೇ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಮನೆಯ ಮತ್ತು ಆಪಾದಿತರ ಶೋಧನೆ ನಡೆಸಲು ನ್ಯಾಯಾಲಯದಿಂದ ಶೋಧನಾ ವಾರೆಂಟನ್ನು(SEARCH WARRANT) ಪಡೆದು ನಂತರ ದಾಳಿ ನಡೆಸಲು ಪೊಲೀಸ್ ಅಧೀಕ್ಷಕರ ಅನುಮತಿ ಪಡೆದು ದಾಳಿ ನಡೆಸಿದಾಗ 6,43,000ರೂ. ಮೌಲ್ಯದ 8 ಕೆ.ಜಿ 374 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ
ಆರೋಪಿಗಳನ್ನು ವಿಚಾರಣೆ ಮಾಡಿದಾಗ ಆಪಾದಿತರಿಗೆ ಹಸೈನರ್ ಎಂಬ ವ್ಯಕ್ತಿಯು ಗಾಂಜಾವನ್ನು ತಂದುಕೊಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕುಂದಾಫುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಾರ್ಯಾಚರಣೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಭೀಮಾಶಂಕರ ಸಿನ್ನೂರ ಸಂಗಣ್ಣ ನೇತೃತ್ವದಲ್ಲಿ , ಎಸ್ಸೈ ನೂತನ್ ಡಿ. ಹಾಗೂ ಸಿಬ್ಬಂದಿ ಸೂರ ನಾಯ್ಕ್, ರಾಜು.ಬಿ, ವಿಕ್ರಮ್, ಮಂಜುನಾಥ, ರಮೇಶ್, ಕಿಶನ್ ಗೌಡ, ಶೋಭಾ ಹಾಗೂ ನಯನ, ರಾಮ ರವರು ಭಾಗವಹಿಸಿದ್ದರು