99
ಕುಂದಾಪುರ : ಕೊಲ್ಲೂರು ಠಾಣಾ ವ್ಯಾಪ್ತಿಯ ಇಡೂರು- ಕುಂಡ್ಲಾಡಿ ಗ್ರಾಮದ ಮನೆಯೊಂದರಲ್ಲಿ ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ಲಕ್ಷ್ಮೀ ಎಂಬರು ಶುಭ ಕಾರ್ಯದ ನಿಮಿತ್ತ ಮೇ 16 ರಂದು ಮನೆಗೆ ಬೀಗ ಹಾಕಿ ತೆರಳಿದ್ದು ಸೋಮವಾರ ಮನೆಗೆ ಬಂದು ನೋಡುವಾಗ ಒಳಗಡೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ರೂಮ್ ಒಳಗಡೆಯ ಕಪಾಟು ಪರಿಶೀಲಿಸಿದಾಗ ಅದರಲ್ಲಿದ್ದ 16 ಗ್ರಾಂ ತೂಕದ 2 ಚಿನ್ನದ ಬಳೆ ಹಾಗೂ ದೇವರ ಡಬ್ಬಿ ಹಣ ಕಳವು ಆಗಿತ್ತು. ಕಳವಾದ ಸೊತ್ತಿನ ಒಟ್ಟು ಮೌಲ್ಯ 80 ಸಾವಿರ ರೂ. ಆಗಿದೆ. ಮಾಡಿನ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

