ಕುಂದಾಪುರ : ಕುಂದಾಪುರ ತಾಲೋಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಆಜ್ರಿ ಗ್ರಾಮದ ದೊಡ್ಮನೆ ಸಮೀಪದ ಸರಕಾರಿ ಹಾಡಿ ಯಲ್ಲಿ ಅಂದರ್ – ಬಾಹರ್ ಆಡುತ್ತಿದ್ದ 13 ಜನರನ್ನು ಬಂಧಿಸಿದ್ದಾರೆ ಖಚಿತ ಮಾಹಿತಿ ಮೇರೆಗೆ ಶಂಕರನಾರಾಯಣ ಠಾಣಾಧಿಕಾರಿ ನಾಸೀರ್ ಹುಸೈನ್ ದಾಳಿ ನಡೆಸಿ 14,770 ರೂ.ನಗದು ಹಾಗೂ ಆಟಕ್ಕೆ ಬಳಸಿದ ಇಸ್ಪೀಟು ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ