ಗಂಗೊಳ್ಳಿ : ತ್ರಾಸಿ ಸಮುದ್ರ ತೀರದಲ್ಲಿ ವಾಟರ್ ಬೈಕ್ ಡ್ರೈವ್ ಮಾಡುತ್ತಿದ್ದ ಸಂದರ್ಭದಲ್ಲಿ ಅಲೆಯ ಹೊಡೆತಕ್ಕೆ ವಾಟರ್ ಬೈಕ್ ಸಮುದ್ರದಲ್ಲಿ ಉರುಳಿ ಬಿದ್ದ ಪರಿಣಾಮ ಜೆಷ್ಠಿ ರೈಡ್ ಡ್ರೈವರ್ ಮುರುಡೇಶ್ವರ ಮೂಲದ ನಿವಾಸಿ ರೋಹಿದಾಸ್ (41ವರ್ಷ) ಸಮುದ್ರದಲ್ಲಿ ನಾಪತ್ತೆಯಾಗಿರುವ ಘಟನೆ ನಡೆದಿದ್ದು ಹಿಂದೆ ಕುಳಿತ್ತಿದ್ದ ಪ್ರವಾಸಿಗನನ್ನು ರಕ್ಷಿಸಲಾಗಿದೆ
ಶನಿವಾರ ಸಂಜೆ 5.30 ರ ಸುಮಾರಿಗೆ ರೈಡ್ ಡ್ರೈವರ್ ರೋಹಿದಾಸ್ ಒಬ್ಬ ಪ್ರವಾಸಿಗನನ್ನು ಜೆಷ್ಠಿ ರೈಡ್‌ನಲ್ಲಿ ಕುಳ್ಳಿರಿಸಿ ಕೊಂಡು ಸಮುದ್ರದಲ್ಲಿ ರೈಡ್ ಮಾಡುತ್ತಿದ್ದ ಸಂದರ್ಭ ಅಲೆಯ ಹೊಡೆತಕ್ಕೆ ಜೆಷ್ಠಿ ರೈಡ್ ಸಮುದ್ರದಲ್ಲಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಜೆಸ್ತಿ ರೈಡ್ ಡ್ರೈವರ್ ಸೇರಿ ಪ್ರವಾಸಿಗ ನೀರಿನಲ್ಲಿ ಮುಳುಗಿದ್ದಾರೆ.
ಪ್ರವಾಸಿಗ ಜಾಕೆಟ್ ಬಳಸಿದ್ದರಿಂದ ನೀರಿನಲ್ಲಿ ತೇಲುತ್ತಿದ್ದರಿಂದ ಪ್ರವಾಸಿಗನನ್ನು ಇನ್ನೊಂದು ಜೆಸ್ಕಿ ರೈಡ್ ಮೂಲಕ ರಕ್ಷಣೆ ಮಾಡಲಾಗಿದೆ. ದುರದೃಷ್ಟವಶಾತ್ ಜೆಸ್ಕಿ ರೈಡ್ ಡ್ರೈವರ್ ಜಾಕೆಟ್ ಘಟನೆಯಲ್ಲಿ ದೇಹದಿಂದ ಬೇರ್ಪಟ್ಟಿದ್ದರ ಪರಿಣಾಮ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ
ಮುಳುಗು ತಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ ನೇತೃತ್ವದ ತಂಡ ಹಾಗೂ ಕರಾವಳಿ ಪೊಲೀಸ್ ಠಾಣೆ ಗಂಗೊಳ್ಳಿ ಪಿಎಸ್‌ಐ ಸುಬ್ರಹ್ಮಣ್ಯ ಎಚ್. ಮತ್ತು ಕೆನಡಿ ಸಿಬ್ಬಂದಿಗಳು ಮತ್ತು ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಹರೀಶ್ ಮತ್ತು ಸಿಬ್ಬಂದಿ ರೋಹಿದಾಸ್ ಅವರಿಗಾಗಿ ಸಮುದ್ರದಲ್ಲಿ ಹುಡುಕಾಟ ಮುಂದುವರಿಸಿದ್ದಾರೆ.