ಉಡುಪಿ:ಸ್ಥಳೀಯ ಬ್ರಹ್ಮಗಿರಿ ನಿವಾಸಿಯಾದ ಶ್ರೀಮತಿ ವಿಜಯಾ ಎಂಬವರು ಬುಧವಾರ ಬೆಳಿಗ್ಗೆ 6.00 ಗಂಟೆಯ ಸುಮಾರಿಗೆ ಮೂಡನಿಡಂಬೂರು ಗ್ರಾಮದ ನಾಯರ್ ಕೆರೆ ವಾಣಿಜ್ಯ ತೆರಿಗೆಗಳ ಭವನದ ಎದುರು ರಸ್ತೆಯಲ್ಲಿ ಬ್ರಹ್ಮಗಿರಿಯ ಕಡೆಗೆ ನೆಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಮೋಟಾರ್ ಸೈಕಲ್ ನಿಂದ ಬಂದ 20 ರಿಂದ 30 ವರ್ಷ ಪ್ರಾಯದ ಅಪರಿಚಿತ ಯುವಕರ ಪೈಕಿ ಹಿಂಬದಿ ಸವಾರನು ಶ್ರೀಮತಿ ವಿಜಯರವರ ಕುತ್ತಿಗೆಗೆ ಕೈ ಹಾಕಿ ಅವರನ್ನು ತಳ್ಳಿ ನೆಲಕ್ಕೆ ಬೀಳಿಸಿ ಕುತ್ತಿಗೆಯಲ್ಲಿದ್ದ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಏಗರಿಸಿದ್ದು ಸುಲಿಗೆಯಾದ ಮಾಂಗಲ್ಯ ಸರದ ಒಟ್ಟು ಮೌಲ್ಯ 2.50 ಲಕ್ಷವಾಗಿದ್ದು ಈ ಬಗ್ಗೆ ಉಡುಪಿ ನಗರ ಪೋಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ