ಕುಂದಾಪುರ:ಕಂಬದಕೋಣೆಯ ಹೊಳೆಬಾಗಿಲು ಎಂಬಲ್ಲಿ ಸರಕಾರಿ ಬಸ್‌ಗೆ ಕಲ್ಲೆಸೆದ ಬಗ್ಗೆ ಬೈಂದೂರು ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ ಸರಕಾರಿ ಬಸ್ಸು ಕುಂದಾಪುರದಿಂದ ಭಟ್ಕಳದ ಕಡೆ ತೆರಳುತ್ತಿದ್ದು ಕಂಬದಕೋಣೆಯ ಹೊಳೆಬಾಗಿಲು ಎಂಬಲ್ಲಿ ಬಸ್ ನ ಎದುರಿನಲ್ಲಿ ಮಜೀದ್ ಎಂಬಾತ ಬೈಕ್ ನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಸಾಗುತಿದ್ದಾಗ ಬಸ್ ನ ಚಾಲಕ ರಾಮಕೃಷ್ಣ ಪೂಜಾರಿ ಆಕ್ಷೇಪಿಸಿ ಸರಿಯಾಗಿ ಚಲಾಯಿಸುವಂತೆ ಸಲಹೆ ನೀಡಿದ್ದರು ಕಂಬದಕೋಣೆ ಬಸ್ ಸ್ಟಾಪ್ ನಲ್ಲಿ ಬಸ್ ನಿಲ್ಲಿಸಿದಾಗ ಆರೋಪಿ ಮಜೀದ್ ಎಕಾಎಕೀ ಬಸ್ಗೆ ಕಲ್ಲು ತೂರಾಟ ನಡೆಸಿದ್ದು ರಾಮಕೃಷ್ಣ ಪೂಜಾರಿ ಗಾಯಗೊಂಡಿದ್ದು ಕಿಟಕಿಯ ಗಾಜುಗಳನ್ನು ಜಖಂಗೊಳಿಸಿದ್ದಾನೆ