ಕುಂದಾಪುರ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟಕ್ಕೆ ಯತ್ನಿಸಿದ ಐದು ಮಂದಿಯನ್ನು ಸೆನ್ ಅಪರಾಧ ದಳ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ
ಬೈಂದೂರು ತಾಲೂಕು ಮರವಂತೆ ಬೀಚ್ ಸಮೀಪ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇದಿತ ಮಾದಕ ವಸ್ತು ಎಂಡಿಎಂಎ ಪೌಡರ್ ಅನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು
ಬಂಧಿತ ಆರೋಪಿಗಳನ್ನು ಅಬ್ರಾರ್ ಶೇಖ್, ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್, ಮೊಹಮ್ಮದ್ ಜಿಯಾಮ್ ಬೆಳ್ಳಿ, ನೌಮನ್, ಸಜ್ಜಾದ್ ಮುಸ್ತಕೀಮ್ ಕೆವಾಕ ಎಂದು ಗುರುತಿಸಲಾಗಿದೆ