Home » ಮದುವೆ ನಿಶ್ಚಿತಾರ್ಥದ ವರ ಮಹಾಶಯ ನಾಪತ್ತೆ
 

ಮದುವೆ ನಿಶ್ಚಿತಾರ್ಥದ ವರ ಮಹಾಶಯ ನಾಪತ್ತೆ

by Kundapur Xpress
Spread the love

ಕುಂದಾಪುರ : ನಾಳೆ ಡಿ.05 ರಂದು ಮದುವೆ ನಿಗದಿಯಾಗಿದ್ದ ನಿಶ್ಚಿತಾರ್ಥದ ಹುಡುಗ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕುಂದಾಪುರ ತಾಲೋಕಿನ ಹೊಂಬಾಡಿ-ಮಂಡಾಡಿ ಗ್ರಾಮದ ಶಿವ ಪೂಜಾರಿ ಎಂಬವರ ಪುತ್ರ 28 ವರ್ಷ ಪ್ರಾಯದ ಕಾರ್ತಿಕ್‌ ನಾಪತ್ತೆಯಾದ ವರ ಮಹಾಶಯ

ಕುಂದಾಪುರ ಬಳಿಯ ಕೋಟೇಶ್ವರ ಗ್ರಾಮದ ಜಯಲಕ್ಷ್ಮೀ ಹಾಗೂ ಕಾರ್ತಿಕ್‌ ಸುಮಾರು 2 ವರ್ಷದಿಂದ ಪ್ರೀತಿಸಿ ಮದುವೆ ಮಾತುಕತೆ ಮಾಡಿಕೊಂಡು ದಿನಾಂಕ: 05/12/2024 ರಂದು ಸಾಂಪ್ರದಾಯಿಕವಾಗಿ ಮದುವೆ ಆಗುವುದಾಗಿ ನಿಶ್ಚಯಿಸಿದ್ದು ಅದರಂತೆ ದಿನಾಂಕ: 16/07/2024 ರಂದು ಮದುವೆ ನೊಂದಣಿ ಮಾಡಿಕೊಂಡಿದ್ದಾರೆ

ಹೀಗಿರುವಾಗ ಕಳೆದ ತಿಂಗಳು ನ.27ರಂದು ಅಪರಾಹ್ನ ವೇಳೆ ಕಾರ್ತಿಕ್ ಜಯಲಕ್ಷ್ಮಿಗೆ ಕರೆ ಮಾಡಿ ತಾನು ಕೋಟೇಶ್ವರದಲ್ಲಿದ್ದು ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದೆ ಎಂದು ಹೇಳಿ ಹೋಗಿದ್ದರು.ನಂತರ ಅವರು ವಾಪಾಸ್ಸು ಬಾರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿದೆ.

5.6 ಅಡಿ ಎತ್ತರ, ಗೋದಿ ಮೈಬಣ್ಣ ಎಡಗೈ ಮೇಲೆ ಮಾರ್ಕ್, ಬಲಕಿವಿಯಲ್ಲಿ ಚಿನ್ನದ ರಿಂಗ್ ಇರುತ್ತದೆ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!