ಮೋಸ್ಟ್ ವಾಂಟೆಡ್ ವಾರಂಟ್ ಆರೋಪಿ ಬಂಧನ
ಸುರತ್ಕಲ್: ವಿವಿಧ ಪ್ರಕರಣಗಳಲ್ಲಿ ಅರೋಪಿಯಾಗಿ ತಲೆಮರೆಸಿಕೊಂಡಿದ್ದು 23 ಪ್ರಕರಣಗಳಲ್ಲಿ ವಾರಂಟ್ ಆಗಿದ್ದ ಮೋಸ್ಟ್ ವಾಂಟೆಡ್ ವಾರಂಟ್ ಆರೋಪಿಯಾದ ಸುರತ್ಕಲ್ನ ಕಾಟಿಪಳ್ಳ ಗ್ರಾಮದ ಅಜರುದ್ದೀನ್ (29 ವರ್ಷ) ಎಂಬಾತನ್ನು ಸುರತ್ಕಲ್ ಠಾಣೆಯ ನಿರೀಕ್ಷಕರಾದ ಮಹೇಶ್ ಪ್ರಸಾದ್ ನೇತೃತ್ವದ ತಂಡ ಬಂಧಿಸಿದೆ
ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಮೇಲೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವಾರು ಪೋಲೀಸ್ ಠಾಣೆಗಳಲ್ಲಿ ಕೊಲೆ ಸುಲಿಗೆ ಹಲ್ಲೆ ದರೋಡೆ ಮುಂತಾದ ಪ್ರಕರಣಗಳು ದಾಖಲಾಗಿತ್ತು ಮಂಗಳೂರು ಪೊಲೀಸು ಆಯುಕ್ತರ ಆದೇಶದ ಮೇರೆಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಆಯುಕ್ತರಾದ ಮನೋಜ್ ಕುಮಾರ್ರವರ ನಿರ್ದೇಶನದಂತೆ ಸುರತ್ಕಲ್ ಪೊಲೀಸು ಠಾಣೆಯ ನಿರೀಕ್ಷಕರಾದ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸು ಉಪನಿರೀಕ್ಷಕರಾದ ಮಲ್ಲಿಕಾರ್ಜುನ್ ಸಿಬ್ಬಂದಿಗಳಾದ ಅಜಿತ್ ಮ್ಯಾಥ್, ಮಣಿಕಂಠ, ಕಾರ್ತಿಕ್ ಅವರ ತಂಡ ಆರೋಪಿಯನ್ನು ದಸ್ತಗಿರಿ ಮಾಡಿ ಮಂಗಳೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ ಆರೋಪಿಯು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ