Home » ಪ್ರೇಯಸಿಯನ್ನು ಕೊಂದು ಪ್ರೇಮಿ ಆತ್ಮಹತ್ಯೆ
 

ಪ್ರೇಯಸಿಯನ್ನು ಕೊಂದು ಪ್ರೇಮಿ ಆತ್ಮಹತ್ಯೆ

ಪ್ರೀತಿ ವೈಫಲ್ಯ ಶಂಕೆ

by Kundapur Xpress
Spread the love

ಚಿಕ್ಕಮಗಳೂರು : ಬೇರೆಯವರ ಜೊತೆ ನಿಶ್ಚಿತಾರ್ಥವಾಗಿದ್ದ ಯುವತಿಯನ್ನು ಪ್ರವಾಸಕ್ಕೆ ಹೋಗೋಣವೆಂದು ಕಾರಿನಲ್ಲಿ ಕರೆತಂದು ಆಕೆಯ ಕತ್ತು ಸೀಳಿ ಕೊಲೆ ಮಾಡಿ ಬಳಿಕ ಯುವಕನೊಬ್ಬ ಮರಕ್ಕೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಚಿಕ್ಕಮಗಳೂರು ಜಿಲ್ಲೆಯ ದಾಸರ ಹಳ್ಳಿ ಗ್ರಾಮದ ಬಳಿ ನಡೆದಿದೆ.

ರಾಮನಗರ ಜಿಲ್ಲೆಯ ಮಾಗಡಿಯ ನಿವಾಸಿ ಪೂರ್ಣಿಮಾ (25) ಮೃತ ದುರ್ದೈವಿ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಮಧು ಕೊಲೆ ಮಾಡಿ ನೇಣಿಗೆ ಶರಣಾದ ಯುವಕ. ಪೂರ್ಣಿಮಾ ಮಾಗಡಿಯ ಖಾಸಗಿ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದರು. ಮಧು ಮಾಗಡಿಯಲ್ಲಿ ಚಾಲಕರಾಗಿದ್ದರು ಎಂದು ತಿಳುದು ಬಂದಿದೆ. ಪೂರ್ಣಿಮ ಅವರ ಕುಟುಂಬಕ್ಕೆ ಮಧು ಚಿರಪರಿಚಿತರಾಗಿದ್ದರು. ಇವರಿಬ್ಬರು ಪ್ರೇಮಿಗಳಾಗಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಬಳಿಕ ಕೊಲೆ ಮತ್ತು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.

 

Related Articles

error: Content is protected !!