Home » ಡ್ರಗ್ಸ್‌ ಕೇಸ್‌ : ತನಿಖೆ ಆರಂಭಿಸಿದ ಎನ್‌ಸಿಬಿ ತಂಡ
 

ಡ್ರಗ್ಸ್‌ ಕೇಸ್‌ : ತನಿಖೆ ಆರಂಭಿಸಿದ ಎನ್‌ಸಿಬಿ ತಂಡ

by Kundapur Xpress
Spread the love

ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ರಾಜ್ಯದಲ್ಲೇ ದೊಡ್ಡ ಡ್ರಗ್ಸ್ ಬೇಟೆಯಾಡಿರುವ ಪ್ರಕರಣದಲ್ಲಿ ದೆಹಲಿಯ ನಾರ್ಕೋಟಿಕ್ ಕ್ರೈಮ್ ಬ್ಯೂರೋ(ಎನ್‌ಸಿಬಿ) ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. ಈ ಪ್ರಕರಣದ ಆರೋಪಿಗಳು ಬೆಂಗಳೂರಿನಲ್ಲಿ ಬಂಧನ ಆಗಿರುವುದರಿಂದ ಅಲ್ಲಿಂದಲೇ ತನಿಖೆ ಆರಂಭಿಸುತ್ತಿದ್ದಾರೆ. ಇದೇ ವೇಳೆ ಬಂಧಿತ ಆರೋಪಿಗಳ ಮಾಹಿತಿ ಆಧರಿಸಿ ಮಂಗಳೂರು ಪೊಲೀಸರು ಡ್ರಗ್ಸ್ ಜಾಲದ ತನಿಖೆಯನ್ನು ದೆಹಲಿಗೆ ವಿಸ್ತರಿಸಿದ್ದಾರೆ

ಬೆಂಗಳೂರಿಗೆ ವಿಮಾನದಲ್ಲಿ ಡ್ರಗ್ಸ್ ಪೂರೈಕೆ ಆಗುತ್ತಿರುವುದು ಪತ್ತೆಯಾಗಿರುವುದರಿಂದ ದೆಹಲಿ ಸುತ್ತಮುತ್ತ ದೊಡ್ಡ ಪ್ರಮಾಣದ ಡ್ರಗ್ಸ್ ತಯಾರಿ ಆಗುತ್ತಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ದೆಹಲಿಯ ಕೈಗಾರಿಕಾ ಪ್ರದೇಶದಲ್ಲೇ ಡ್ರಗ್ಸ್ ತಯಾರಿ ನಡೆಸುತ್ತಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ

 

Related Articles

error: Content is protected !!