Home » ಪೊಲೀಸ್ ಠಾಣೆಯಲ್ಲೇ ರಮ್ಮಿ ಆಟ : ಐವರು ಪೊಲೀಸರ ಸಸ್ಪೆಂಡ್
 

ಪೊಲೀಸ್ ಠಾಣೆಯಲ್ಲೇ ರಮ್ಮಿ ಆಟ : ಐವರು ಪೊಲೀಸರ ಸಸ್ಪೆಂಡ್

by Kundapur Xpress
Spread the love

ಕಲಬುರಗಿ‌ : ಚಿತ್ತಾಪುರ ತಾಲ್ಲೂಕಿನ ವಾಡಿ ಪೊಲೀಸ್ ಠಾಣೆಯೊಳಗೆ ಇಸ್ಪೀಟು ಆಡಿದ ಆರೋಪದ ಮೇಲೆ  ಐವರು ಪೊಲೀಸ್ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕರಿಗಳು ಸಸ್ಪೆಂಡ್‌ ಮಾಡಿದ್ದಾರೆ

ಅಮಾನತುಗೊಂಡ ಪೊಲೀಸ್ ಅಧಿಕಾರಿಗಳನ್ನು ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮೊಹಮ್ಮದ್ ಮಿಯಾ, ಹೆಡ್ ಕಾನ್‌ಸ್ಟೆಬಲ್‌ಗಳಾದ ನಾಗರಾಜ್, ಸಾಯಿಬಣ್ಣ, ಇಮಾಮ್ ಮತ್ತು ಕಾನ್‌ಸ್ಟೆಬಲ್ ನಾಗಭೂಷಣ್ ಎಂದು ತಿಳಿದುಬಂದಿದೆ

ಕಲಬುರಗಿ ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಅವರು ಐವರು ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದು, ಘಟನೆಯ ಬಗ್ಗೆ ವಿವರಣೆ ಕೋರಿ ಎಸ್‌ಐ ತಿರುಮಲೇಶ್ ಅವರಿಗೆ ನೋಟಿಸ್ ನೀಡಿದ್ದಾರೆ.

ಅಮಾನತುಗೊಂಡ ಅಧಿಕಾರಿಗಳು ಕರ್ತವ್ಯದ ಸಮಯದಲ್ಲಿ ಪೊಲೀಸ್ ಠಾಣೆಯ ಮೊದಲ ಮಹಡಿಯಲ್ಲಿ ಇಸ್ಪೀಟು ಆಡಲು ಗುಂಪು ಗುಂಪಾಗಿ ಸೇರಿದ್ದರು ಎಂದು ಆರೋಪಿಸಲಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸಮವಸ್ತ್ರದಲ್ಲಿ ಇಸ್ಪೀಟು ಆಡುತ್ತಿರುವ ಏಳು ಸೆಕೆಂಡುಗಳ ವಿಡಿಯೋ ವೈರಲ್ ಆಗಿತ್ತು ಇದು ಪೊಲೀಸ್‌ ಇಲಾಖೆಗೆ ತೀವ್ರ ಮುಜುಗರ ಉಂಟು ಮಾಡಿತ್ತು

 

Related Articles

error: Content is protected !!