Home » ಈಚರ್ ಲಾರಿ ಬೆನ್ನಟ್ಟಿದ್ದ ಪೊಲೀಸ್ ಜೀಪಿ : ಆರೋಪಿ ಕಾಲಿಗೆ ಗುಂಡಿಕ್ಕಿ ವಶಕ್ಕೆ
 

ಈಚರ್ ಲಾರಿ ಬೆನ್ನಟ್ಟಿದ್ದ ಪೊಲೀಸ್ ಜೀಪಿ : ಆರೋಪಿ ಕಾಲಿಗೆ ಗುಂಡಿಕ್ಕಿ ವಶಕ್ಕೆ

by Kundapur Xpress
Spread the love

ಪುತ್ತೂರು:ಜಾನುವಾರುಗಳನ್ನು ಈಚರ್ ಲಾರಿಯಲ್ಲಿ ತುಂಬಿಕೊಂಡು ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಮಾಹಿತಿ ಪಡೆದು ಪೊಲೀಸರು ಟೆಂಪೋವನ್ನು ಬೆನ್ನಟ್ಟಿದ್ದ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದುಕೊಂಡ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರ ಮಂಗಳ ಎಂಬಲ್ಲಿ  ನಡೆದಿದೆ.ಸುಮಾರು ಹತ್ತು ಕಿ.ಮೀ ಉದ್ದಕ್ಕೆ ಪೊಲೀಸರು ಬೆನ್ನಟ್ಟಿದ್ದು ಈ ವೇಳೆ ಜೀಪಿಗೆ ಡಿಕ್ಕಿಹೊಡೆದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ನೆಟ್ಟಣಿಗೆ ಮುಡ್ನೂರು ಬೆಳ್ಳಿಚಡವು ಒಳರಸ್ತೆಯ ಮೂಲಕ ಕೇರಳಕ್ಕೆ ಸಾಗುತ್ತಿದ್ದಾಗ ಪೊಲೀಸರು ಅಡ್ಡಹಾಕಿದ್ದಾರೆ.

ವಾಹನ ನಿಲ್ಲಿಸಲು ಸೂಚಿಸಿದ ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ್ದಾರೆ. ಅಲ್ಲದೆ, ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾರೆ. ಬೆಳ್ಳಿಚಡವು ಬಳಿ ಲಾರಿ ಬಿಟ್ಟು ಒಬ್ಬಾತ ಓಡಿದ್ದು ಈ ವೇಳೆ ಪಿಎಸ್‌ಐ ಜಂಬುರಾಜ್ ಮಹಾಜನ್ ತನ್ನ ಪಿಸ್ತೂಲಿನಿಂದ ಫೈರ್ ಮಾಡಿದ್ದಾರೆ. ಒಂದು ಗುಂಡು ಈಚರ್ ಲಾರಿ ಮೇಲೆ ಬಿದ್ದಿದ್ದು, ಇನ್ನೊಂದು ಗುಂಡು ಲಾರಿ ಚಲಾಯಿಸುತ್ತಿದ್ದ ಅಬ್ದುಲ್ಲಾ (40) ಎಂಬಾತನ ಕಾಲಿಗೆ ಬಿದ್ದಿದೆ. ಈ ವೇಳೆ, ಲಾರಿ ನಿಲ್ಲುತ್ತಲೇ ಇನ್ನೊಬ್ಬ ಆರೋಪಿ ಇಳಿದು ಪರಾರಿಯಾಗಿದ್ದು ಗಾಯಾಳು ಚಾಲಕನನ್ನು ಬಂಧಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತರಲಾಗಿದೆ. ಆರೋಪಿ ಅಬ್ದುಲ್ಲಾ ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾಗಿದ್ದು ಅಕ್ರಮವಾಗಿ ಗೋವುಗಳನ್ನು ಹಾಸನದಿಂದ ಸುಳ್ಯ ಪುತ್ತೂರು ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಲಾರಿಯಲ್ಲಿದ್ದ 10 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಬ್ದುಲ್ಲಾ ವಿರುದ್ಧ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

Related Articles

error: Content is protected !!