ಕಾರ್ಕಳ : ಕಾರ್ಕಳ ತಾಲೂಕಿನ ಯುವತಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅತ್ಯಾಚಾರ ಆರೋಪಿ ಅಲ್ತಾಫ್ ಹಾಗೂ ಅಭಯ್ ಗೆ 7 ದಿನ ಪೊಲೀಸ್ ಇಲಾಖೆ ಕಸ್ಟಡಿಗೆ ತೆಗೆದುಕೊಂಡಿದ್ದು ಡ್ರಗ್ಸ್ ಅಥವಾ ಗಾಂಜಾ ಪ್ರಕರಣದ ಮೇಲಿನ ತನಿಖೆಗಾಗಿ ಕಸ್ಟಡಿಗೆ ತೆಗೆದು ಕೊಳ್ಳಲಾಗಿದೆ. ಆರೋಪಿ ಕ್ಷೇವಿಯನ್ನು ಹಿರಿಯಡ್ಕ ಜೈಲಿನಲ್ಲಿ ಇರಿಸಲಾಗಿದೆ. ಬಂಧಿತ ಅಭಯ್, ಅಲ್ತಾಫ್ಗೆ ಮಾದಕ ವಸ್ತು ವಿತರಿಸಿದ್ದ. ಇದನ್ನು ಸಂಸ್ರಸ್ತ ಯುವತಿಗೆ ಅಲ್ತಾಫ್ ನೀಡಿದ್ದ ಎಂದು ಆರೋಪಿಸಲಾಗಿದೆ. ಈತ ಕಳೆದ ವರ್ಷ ತೆಳ್ಳಾರಿನಲ್ಲಿ ಮಾದಕವಸ್ತು ಸೇವನೆ ಪ್ರಕರಣದಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದ ಎಂದು ತಿಳಿದುಬಂದಿದೆ. ಮಾದಕ ದ್ರವ್ಯ ಪತ್ತೆ ಪರೀಕ್ಷೆಯಲ್ಲಿ ಸಂತ್ರಸ್ತೆ ಯುವತಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿತ್ತು.