Home » ಉಪ್ಪೂರು ಬಳಿ ಗಾಂಜಾ ಮಾರಾಟಗಾರರ ಸೆರೆ
 

ಉಪ್ಪೂರು ಬಳಿ ಗಾಂಜಾ ಮಾರಾಟಗಾರರ ಸೆರೆ

by Kundapur Xpress
Spread the love

ಉಡುಪಿ : ಇಲ್ಲಿನ ಬ್ರಹ್ಮಾವರದ ಉಳ್ಳೂರಿನ ಕೆಜಿ ರೋಡ್ ಕ್ರಾಸ್ ಬಳಿ ನಿಷೇಧಿತ ಗಾಂಜಾವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿ, 8 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾವನ್ನು ಸೆನ್ ಠಾಣಾ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಸತ್ಯರಾಜ್ ಅಲಿಯಾಸ್ ತಂಬಿ, ಅಣ್ಣ ಕೃಷ್ಣ ಹಾಗೂ  ಶಕಿಲೇಶ್ ಎಂದು ಗುರುತಿಸಲಾಗಿದೆ. ಸತ್ಯರಾಜ್ ಅಲಿಯಾಸ್ ತಂಬಿ ಅಣ್ಣ ಎಂಬಾತ ವ್ಯಕ್ತಿಗಳಿಬ್ಬರ ಮೂಲಕ ಮುಂಬಯಿಯಿಂದ ತರಿಸಿಕೊಂಡಿರುವ ಗಾಂಜಾವನ್ನು ಅವರಿಂದ ಪಡೆಯಲು ಸ್ಥಳಕ್ಕೆ ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಸೆನ್ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ 10 ಕಿಲೋ 138 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದು, 3 ಮೊಬೈಲ್, 1570 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ ಆರೋಪಿಗಳು ಮುಂಬಯಿ ನಿವಾಸಿ ಶಿವು ಅಲಿಯಾಸ್ ಎಂಬಾತನಿಂದ ಗಾಂಜಾ ಖರೀದಿಸಿರುವ ಬಗ್ಗೆ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!