ಕುಂದಾಪುರ : ಸಮೀಪದ ಕೋಣಿ ಗ್ರಾಮದ ಹುಣ್ಸೆಕಟ್ಟೆ ಬಳಿಯ ಮೂಡಹಿತ್ಲುವಿನ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಕುಂದಾಪುರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ
ಕುಂದಾಪುರ ಪೊಲೀಸ್ ಠಾಣೆ ನಿರೀಕ್ಷಕರಾದ ಎನ್ ನಂಜಪ್ಪ ರವರಿಗೆ ಬಂದ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ನಿತಿನ್ ಮತ್ತು ಚಂದನ್ ಎಂಬವರನ್ನು ಬಂಧಿಸಿದ್ದು ರವಿ ಹಾಗೂ ಇತರ ನಾಲ್ಕು ಆಟಗಾರರು ಆಟಕ್ಕೆ ಬಳಸಿದ ಹಣವನ್ನು ಸ್ಥಳದಲ್ಲಿಯೇ ಬೀಸಾಕಿ ಓಡಿಹೋಗಿದ್ದಾರೆ
ಇವರು ಜುಗಾರಿ ಆಟಕ್ಕೆ ಬಳಸಿದ 2 ಕೋಳಿ ಹುಂಜ, ಕೋಳಿಯ ಕಾಲಿಗೆ ಕಟ್ಟಿದ ಚೂರಿ, ಸ್ಥಳದಲ್ಲಿದ್ದ ಬೈಕ್ ಮತ್ತು ಆಟಕ್ಕೆ ಬಳಸಿದ 1.100 ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆ ತಡೆ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ