ಬೈಂದೂರು: ಬೈಂದೂರು ಸಮೀಪದ ಬಿಜೂರು ಪ್ರೌಢಶಾಲೆಯ ಶಿಕ್ಷಕ ಸುಬ್ರಹ್ಮಣ್ಯ ಮುದ್ದೋಡಿಯ ವಿರುದ್ಧ ವಿದ್ಯಾರ್ಥಿನಿಗೆ ಮಾನಸಿಕ ಹಿಂಸೆ ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸಪ್ಟೆಂಬರ್ 26ರಂದು ಶಿಕ್ಷಕ ಸುಬ್ರಹ್ಮಣ್ಯ ಮುದ್ದೋಡಿ ಬಾಲಕಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡು ಅವಾಚ್ಯ ಪದಗಳನ್ನು ಬಳಸಿ ಅವಮಾನಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ವಿದ್ಯಾರ್ಥಿನಿಯು ತನ್ನ ಮನೆಯರಲ್ಲಿ ತಿಳಿಸಿದ್ದು ಬಳಿಕ ಮನೆಯವರು ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕೊನೆಗೆ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಫೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ