ಬೆಂಗಳೂರು : ಇನ್ಸ್ಟಾಗ್ರಾಂನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಪವಿತ್ರಾ ಗೌಡ ಪರೋಕ್ಷವಾಗಿ ಪೋಸ್ಟ್ ಹಾಕಿದ್ದು ವಿವಾದವಾಗಿತ್ತು. ಆ ವಿವಾದದ ಬಳಿಕ ಪವಿತ್ರಾ ಗೌಡರಿಗೆ ರೇಣುಕಾಸ್ವಾಮಿ ಕಾಟ ಶುರುವಾಗಿದೆ. ತನ್ನನ್ನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಆತ, ಇನ್ ಸ್ಟಾಗ್ರಾಂನಲ್ಲಿ ಪವಿತ್ರಾರವರ ಪೋಟೋಗಳಿಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದ.
ಇನ್ಸ್ಟಾಗ್ರಾಂನಲ್ಲಿ ‘ತನೀಶಾ ರೆಡ್ಡಿ 2205′ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ರೇಣುಕಾಸ್ವಾಮಿ, ಪ್ರೊಫೈಲ್ಗೆ ಯುವತಿ ಭಾವಚಿತ್ರ ಹಾಕಿದ್ದ.”how come darshan sir not travelling with u. he is seen only with his wife vijay lakshmi, ashte bidi paapa nivu keep, keep he in the society’.”issue madi joker aghidhu public nallie, same nimma fiend pavithraxyz, so pls u take her, this time karnataka janna avali jyothe nimminu serisi adbitharu publicenalli
ಹೀಗೆ ರೇಣುಕಾಸ್ವಾಮಿ ಕಾಮೆಂಟ್ ಹಾಕಿದ್ದ. ಇದಲ್ಲದೆ ಇನ್ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡರಿಗೆ ಖಾಸಗಿಯಾಗಿ ಆತ ನಿರಂತರವಾಗಿ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿದ್ದ. ಇದೂ ಅತಿರೇಕಕ್ಕೆ ಹೋಗಿ ಮರ್ಮಾಂಗದ ಫೋಟೋ ಕಳುಹಿಸಿ ಆತ ವಿಕೃತಿ ಮೆರೆದಿದ್ದ. ಈ ಮೆಸೇಜ್ ಬಗ್ಗೆ ದರ್ಶನ್ಗೆ ಪವಿತ್ರಾಗೌಡ ತಿಳಿಸಿದ್ದಳು. ಆಗ ಕೆರಳಿದ ದರ್ಶನ್, ರೆಡ್ಡಿ ಹೆಸರಿನ ಖಾತೆ ಬಗ್ಗೆ ವಿಚಾರಿಸಿದಾಗ ರೇಣುಕಾಸ್ವಾಮಿ ಎಂಬುದು ಗೊತ್ತಾಗಿದೆ. ಬಳಿಕ ಬೆದರಿಸಿ ಎಚ್ಚರಿಕೆ ಕೊಡಲು ಕರೆತಂದು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.