ಉಳ್ಳಾಲ : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ ರೋಡ್ ಶಾಖೆಯ ದರೋಡೆ ಪ್ರಕರಣಕ್ಕೆ ಒಂದು ವಾರ ಪೂರೈಕೆಯಾಗಿದ್ದು, ಪ್ರಕರಣದ ರೂವಾರಿಗಳು ತಮಿಳುನಾಡಲ್ಲಿ ಬಂಧಿತರಾಗಿ ಸದ್ರಿ ಉಳ್ಳಾಲ ಪೊಲೀಸರ ಕಸ್ಟಡಿಯಲ್ಲಿರುವ ಆರೋಪಿಗಳಾದ ಮುರುಗಂಡಿ ತೇವರ್ ಮತ್ತು ಯೋಶುವಾ ರಾಜೇಂದ್ರನ್ ಎಂಬವರನ್ನು ಪೊಲೀಸರು ಶುಕ್ರವಾರ ಮಧ್ಯಾಹ್ನದಂದೇ ಬಿಗಿ ಬಂದೋಬಸ್ತಿನೊಂದಿಗೆ ದರೋಡೆ ನಡೆದಿದ್ದ ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ಮುರುಗಂಡಿ ದೇವರ್ ಮತ್ತು ಯೋಶುವಾ ರಾಜೇಂದ್ರನ್ ಇಬ್ಬರನ್ನು ಉಳ್ಳಾಲ ಪೊಲೀಸರು ಶುಕ್ರವಾರ ಮಧ್ಯಾಹ್ನ ದರೋಡೆ ನಡೆದಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ. ರೋಡ್ ಶಾಖೆ ಮತ್ತು ದರೋಡೆಗೆ ಸ್ಕೆಚ್ ಹಾಕಲಾಗಿದ್ದ ಅಲಂಕಾರ ಗುಡ್ಡೆಯ ಖಾಸಗಿ ಕಾಲಿ ಪ್ರದೇಶಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಿದ್ದಾರೆ.