Home » ಅಕ್ರಮ ಮರಳು ಸಾಗಾಟ – ಇಬ್ಬರ ಬಂಧನ
 

ಅಕ್ರಮ ಮರಳು ಸಾಗಾಟ – ಇಬ್ಬರ ಬಂಧನ

by Kundapur Xpress
Spread the love

ಕುಂದಾಪುರ : ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಡಿ ಕನ್ಯಾನ ಗ್ರಾಮದ ರಾಮಮಂದಿರದ ಬಳಿ ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಕೋಟ ಪೊಲೀಸ್‌ ಉಪ ನಿರೀಕ್ಷಕರಾದ ಸುಧಾ ಪ್ರಭುರವರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ

ಸ್ಥಳ ಪರಿಶಿಲನೆ ನಡೆಸಿದಾಗ ಅಂಥೋನಿ ಎಂಬುವರ ಮನೆಯ ಎದುರು ರಸ್ತೆಯಲ್ಲಿ ಮರಳು ತುಂಬಿದ KA-20-B-9126 ನೇ ಟಾಟಾ 407 ಟೆಂಪೋ ನಿಂತಿದ್ದು, ವಾಹನದಲ್ಲಿ ಗಣೇಶ ಹಾಗೂ ಚರಣ್‌ ರಾಜ್‌ ಎಂಬುವವರಿದ್ದು ಅವರನ್ನು ವಿಚಾರಿಸಿದಾಗ ಗಣೇಶ ಟೆಂಪೋ ಚಾಲಕನಾಗಿ ಹಾಗೂ ಚರಣರಾಜ್‌ ಜೆ.ಸಿ.ಬಿ ಆಪರೇಟರ್‌ ಆಗಿ ಕೆಲಸ ಮಾಡಿಕೊಂಡಿದ್ದು ನಾವು ಸಾಲಿಗ್ರಾಮದ ಪ್ರಕಾಶ ಎಂಬುವವರ ಸೂಚನೆಯಂತೆ ಅಂಥೋನಿ ಎಂಬುವವರ ಮನೆಯ ಅಂಗಳದ ನೆಲದಲ್ಲಿ ಹುದುಗಿಸಿ ಸಂಗ್ರಹಿಸಿಟ್ಟ ಮರಳು ರಾಶಿಯಲ್ಲಿನ ಮರಳನ್ನು ಜೆ.ಸಿ.ಬಿ ಮುಖಾಂತರ ತೆಗೆದು ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತೀರುವುದಾಗಿ ತಿಳಿಸಿದ್ದಾರೆ ಟಿಪ್ಪರನ್‌ ಮಾಲಕನ ಹೆಸರು ಪ್ರಕಾಶ ಎಂಬುದಾಗಿ ಎಂಬುದಾಗಿ ತಿಳಿದು ಬಂದಿದ್ದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

   

Related Articles

error: Content is protected !!