Home » ಸಮುದ್ರಪಾಲಾದ ಮೀನುಗಾರರ ಸುಳಿವಿಲ್ಲ
 

ಸಮುದ್ರಪಾಲಾದ ಮೀನುಗಾರರ ಸುಳಿವಿಲ್ಲ

by Kundapur Xpress
Spread the love

ಕುಂದಾಪುರ : ಮೀನುಗಾರಿಕೆಗೆ ಕಡಲಿಗಿಳಿದ ವೇಳೆ ಭಾರೀ ಗಾತ್ರದ ಅಲೆ ಅಪ್ಪಳಿಸಿ ಮೀನುಗಾರಿಕಾ ದೋಣಿ ಮಗುಚಿ ಬಿದ್ದ ಪರಿಣಾಮ ನಾಲ್ವರು ಮೀನುಗಾರರ ಪೈಕಿ ಮೂವರು ನೀರುಪಾಲಾಗಿದ್ದು ಇನ್ನೂ ಅವರ ಸುಳಿವು ದೊರೆತಿಲ್ಲ ಎನ್ನಲಾಗಿದೆ

ಗಂಗೊಳ್ಳಿ ನಿವಾಸಿ ಸುರೇಶ್ ಖಾರ್ವಿ (48), ಗಂಗೊಳ್ಳಿ ಬೇಲಿಕೆರಿ ನಿವಾಸಿ ರೋಹಿತ್ ಖಾರ್ವಿ (35), ಮಲ್ಯರಬೆಟ್ಟು ನಿವಾಸಿ ಜಗದೀಶ್ ಖಾರ್ವಿ (50) ನೀರು ಪಾಲಾದವರು

ಗಂಗೊಳ್ಳಿಯಿಂದ ಅರಬ್ಬಿ ಕಡಲಿನ ಕಡೆಗೆ ನಾಲ್ವರು ಮೀನುಗಾರರು ಮಂಗಳವಾರ ಬೆಳಗ್ಗೆ ತೆರಳಿದ್ದರು. ಸಮುದ್ರದಲ್ಲಿ ಭಾರಿ ತುಫಾನ್ ಹಾಗೂ ಗಾಳಿಯ ಒತ್ತಡದ ಕಾರಣದಿಂದ ಮೀನುಗಾರಿಕೆ ನಡೆಸದೆ ಹಿಂದಿರುಗುತ್ತಿದ್ದಾಗ ಗಂಗೊಳ್ಳಿ ಅಳಿವೆಯ ಹೊರ ಭಾಗದಲ್ಲಿ ದೋಣಿ ಮಗುಚಿ ದುರಂತ ಸಂಭವಿಸಿದೆ. ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಕರಾವಳಿ ಕಾವಲು ಪಡೆ, ಗಂಗೊಳ್ಳಿ ಪೊಲೀಸರು, ಸ್ಥಳೀಯ ಮೀನುಗಾರರ ಸಹಕಾರದಿಂದ ನಾಪತ್ತೆಯಾದ ಮೀನುಗಾರರಿಗಾಗಿ ಹುಡುಕಾಟ ನಡಸುತ್ತಿದ್ದು ಇನ್ನೂ ಅವರ ಸುಳಿವು ದೊರೆತಿಲ್ಲ

ಸ್ಥಳಕ್ಕೆ ಸಂಸದರಾದ ಬಿ ವೈ ರಾಘವೇಂದ್ರ ಕೋಟ ಶ್ರೀನಿವಾಸ ಪೂಜಾರಿ ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ ಗುರುರಾಜ್‌ ಗಂಟಿಹೊಳೆ ಮಾಜಿ ಶಾಸಕ ಗೋಪಾಲ್‌ ಪೂಜಾರಿ ಎಸ್ಪಿ ಹರಿರಾಮ್‌ ಶಂಕರ್‌ ಮುಂತಾದವರು ಭೇಟಿ ನೀಡಿದ್ದು ಈಶ್ವರ್‌ ಮಲ್ಪೆ ತಂಡವೂ ಕೂಡ ಹುಡುಕಾಟ ನಡೆಸುತ್ತಿದೆ

 

Related Articles

error: Content is protected !!